ಪ್ರಾಣಿ ಪ್ರೇಮಿ ಕಣ್ಣೂರ ದಂಪತಿಗಳಿಂದ ಶ್ವಾನ (ನಾಯಿ) ಹುಟ್ಟು ಹಬ್ಬ ಆಚರಣೆ

0
300

ಕಲಬುರಗಿ: ಜೇವರ್ಗಿ ಕಾಲೋನಿಯ ನ್ಯೂ ಮಾಕಾ ಲೇಔಟನಲ್ಲಿರುವ ಸುರಪೂರ ತಾಲ್ಲೂಕಿನ ಕುಡಲಗಿ ಗ್ರಾಮದ ಗುತ್ತೇದಾರ ಮಹಾಂತೇಶ ಕುಣ್ಣೂರ ದಂಪತಿಗಳು ಮನೆಯಲ್ಲಿ ಶಾಕಿತ ಶ್ವಾನ ಜನ್ಮದಿನ ಆಚರಿಸಿ ಪ್ರಾಣಿ ಪ್ರೇಮಿ ಮಹತ್ವವನ್ನು ಹೆಚ್ಚಿಸಿದ್ದಾರೆ.

‘ರಾಕಿ’ (ನಾಯಿ) ತನ್ನ ಹುಟ್ಟು ಹಬ್ಬ ಆಚರಿಸಿಕೊಂಡ ಶ್ವಾನ. ತಮ್ಮ ಮನೆಯಲ್ಲಿನ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ಸುಮಾರು 35-40 ಜನ ಅವರ ಬಂಧು-ಬಳಗ ಮತ್ತು ಗೆಳೆಯರೊಂದಿಗೆ ಮಧ್ಯದಲ್ಲೇ ಹುಟ್ಟು ಹಬ್ಬದ ಸಡಗರ ಸಂಭ್ರಮ ನಡೆಯಿತು.

Contact Your\'s Advertisement; 9902492681

ಕಳೆದ ವರ್ಷ ಕೃಷಿ ಇಲಾಖೆಯಿಂದ ಹಮ್ಮಿಕೊಂಡ ಕೃಷಿ ಸಮ್ಮೇಳನದಲ್ಲಿ ಶ್ವಾನಗಳ ಪ್ರದರ್ಶನದಲ್ಲಿ ಒಂದೂವರೆ ವರ್ಷದ ನಾಯಿ (ರಾಕಿ) ಜರ್ಮನ ಡಬಲ್ ಬೋನ ಶರ್ಫಡ ಎಂಬ ವಿಶೇಷ ತಳಿಯ ಎತ್ತರದ ಬಾಹು ಅತಿ ಆಕರ್ಷಣೆ ಹೊಂದಿರುವಂತಹ ಈ ರಾಕಿ ಪ್ರಶಸ್ತಿ ಗಳಿಸಿದ್ದು ಇಲ್ಲಿ ಸ್ಮರಿಸುತ್ತಾ ಇನ್ನೊಂದು ವಿಶೇಷವೇನೆಂದರೆ, ಇದು ಬೇರೆ ನಾಯಿಗಳಂತೆ ರೊಟ್ಟಿ, ಅನ್ನ ಹಾಕಿದರೆ ತಿನ್ನುವುದಿಲ್ಲ. ಮಗುವಿನಂತೆ ತುತ್ತು ಮಾಡಿ ಊಣಿಸಿದರೆ ಮಾತ್ರ ಅದು ತಿನ್ನುತ್ತದೆಂದು ಮಹಾಂತೇಶ ಕುಣ್ಣೂರ ಅವರ ಮಾತಿನಲ್ಲಿ ತಿಳಿಸಿದ್ದಾರೆ.

ಪ್ರಕೃತಿಯಲ್ಲಿ ಒಡಲಿನಲ್ಲಿರುವ ಪ್ರಾಣಿ-ಪಕ್ಷಿ, ಹುಳ-ಹುಪ್ಪಟೆಗಳು ಹಸಿವನ್ನು ನಿಗಿಸಿಕೊಳ್ಳುವ ಉದ್ದೇಶದಿಂದ ಕ್ರೀಯಾಶೀಲವಾಗಿರುತ್ತವೆ, ಇಂತಹದೇ ಆಹಾರ ಬೇಕು, ಹೀಗೆ ಸಿಗಬೇಕು ಎಂಬ ಯಾವ ಬೇಡಿಕೆಗಳನ್ನು ಅವುಗಳಿಗಿರುವುದಿಲ್ಲ. ರುಚಿ, ಬಣ್ಣಗಳ ಗೊಡವೆ ಇಲ್ಲದೇ ಯಾವ ತಕರಾರು ಇಲ್ಲದೇ ಆಹಾರ ಸ್ವೀಕರಿಸುವ ಅನೇಕ ಪ್ರಾಣಿಗಳಲ್ಲಿ ಈ ರಾಕಿ ಬಹಳ ವಿಶೇಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here