ಕಲಬುರಗಿ: ನಗರದ ಮಾಣಿಕ ಪ್ರಭು ಕಾಲೋನಿಯಲ್ಲಿನ ಅಪರಾಜಿತ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಯುವ ಘಟಕದ ಸಂಚಾಲಕರಾದ ಶಿವರಾಜ ಅಂಡಗಿ ಕಾರ್ಯಕ್ರಮ ಉದ್ಘಾಟಿಸಿ, ಸಸಿ ನೆಟ್ಟು ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತ ನಾಡಿದ ಅವರು ಬದುಕುವುದಕ್ಕೆ ಮನುಷ್ಯನಿಗೆ ಆಮ್ಲಜನಕ ಎಷ್ಟು ಮುಖ್ಯವೋ ಪರಿಸರ ಸಮತೋಲನಕ್ಕೆ ಹಸಿರು ವಾತಾವರಣ ಅಷ್ಟೇ ಮುಖ್ಯ. ಪರಿಸರ ಹಚ್ಚ ಹಸಿರಾಗಿಡಲು ನಾವೇಲ್ಲರೂ ಕಡ್ಡಾಯವಾಗಿ ಮನೆಗೊಂದು ಗಿಡ-ಶಾಲೆಗೊಂದು ವನ ನಿರ್ಮಾಣ ಮಾಡಬೇಕೆಂದು ಹೇಳುತ್ತಾ ಬಿಸಿಲೂರಾಗಿರುವ ಕಲಬುರಗಿ ನಗರ ಹಸಿರೂರಾಗಿರಲು ನಾವೇಲ್ಲರೂ ಪ್ರಮಾಣಿಕವಾಗಿ ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ನ್ಯಾಯವಾದಿ ಜೆ.ವಿನೋದಕುಮಾರ ಯಾವ ರೀತಿ ಮಕ್ಕಳಿಗೆ ಅತ್ಯಂತ ಕಾಳಜಿಯಿಂದ ಪಾಲನೆ-ಪೋಷಣೆ ಮಾಡುತ್ತೀರೋ ಅದೇ ನಿಟ್ಟಿನಲ್ಲಿ ನಾವು-ನಿವೇಲ್ಲರೂ ಗಿಡಗಳು ಸಹ ಮಕ್ಕಳಲ್ಲಿ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಪುಷ್ಪಾಂಜಲಿ ಆರ್.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜಗೋಪಾಲ ಭಂಡಾರಿ, ಹಿರಿಯರಾದ ದಯಾನಂದ ಎಕಬೋಟೆ, ಶಿಕ್ಷಕಿ ಅರ್ಚನಾ ಪಗಡೆಕರ್, ಲಕ್ಷ್ಮೀ ವಾರದ, ಪಾಲಕರಾದ ಮಲ್ಲಣ್ಣ ಬನ್ನಶೆಟ್ಟಿ, ಅಪ್ಪಣ್ಣ, ಜೋಶಿ, ಮುಕ್ರಮ, ಅಮರ ಮೇಲಶೆಟ್ಟಿ, ಭೂಮಿಕಾ ಭಂಡಾರಿ ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.