“ಜೀವ ಇರುವುದಕ್ಕೆ ಲಸಿಕೆ, ಜೀವನ ನಡೆಸಲಿಕ್ಕೆ ರೇಶನ್”: ಪ್ಯಾಟಿ ಸ್ವಾಗತ

0
25

ಕಲಬುರಗಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ನಿರ್ಣಯ ಕೈಗೊಂಡು ಜೀವ ಇರಲು ಕೊರೋನಾ ಲಸಿಕೆ, ಜೀವನ ಸಾಗಿಸಲು ಉಚಿತ ರೇಶನ್ , ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿದ್ದು ಎಲ್ಲರಿಗೂ ಸಂತಸ ತಂದಿದೆ ಎಂದು ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ಶ್ಯಾಮರಾವ್ ಪ್ಯಾಟಿ ಅವರು ಸ್ವಾಗತಿಸಿದ್ದಾರೆ.

“ಆತ್ಮ ನಿರ್ಭರ್ ಭಾರತ” ಅಡಿಯಲ್ಲಿ ಎಲ್ಲರೂ ಸ್ವಾಭಿಮಾನದ ಬದುಕು ನಡೆಸಲೂ ಸಹಾಯವಾಗುವುದು. ಕೊರೋನಾ ಎಷ್ಟು ದೊಡ್ಡ ಮಾನವೀಯ ಸಂಕಟವನ್ನು ನಿರ್ಮಿಸಿದೆ ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಮುಂದಾದರು ಭಾರತ ದೇಶದ ಎಲ್ಲ ರಾಜಕೀಯ ಪಕ್ಷಗಳು ಕೋವಿಡ್-೧೯ ಬಗ್ಗೆ ಎಚ್ಚರವಹಿಸಿ ಭಾರತದಿಂದ ಕೊರೋನಾ ಓಡಿಸಲು ಸಂಕಲ್ಪ ಮಾಡಬೇಕು ಎಂದು ಪ್ಯಾಟಿ ಅವರು ನಿವೇದನೆ ಮಾಡಿದ್ದಾರೆ.

Contact Your\'s Advertisement; 9902492681

ದೇಶದಲ್ಲಿ ಯಾವುದೇ ಗರೀಬ್ ದೇಶವಾಸಿಗಳು ಹಸಿವಿನಿಂದ ವಂಚಿತರಾಗಬಾರದು ಎಂದು ಸಮಯಕ್ಕೆ ತಕ್ಕಂತೆ ಉಚಿತ ರೇಶನ್, ಉಚಿತ ಲಸಿಕೆ ಯೋಜನೆ ಎಲ್ಲ ದೇಶಾಭಿಮಾನಿಗಳಿಗೆ ಸಂತಸವುಂಟು ಮಾಡಿದೆ ಎಂದು ಶ್ಯಾಮರಾವ್ ಪ್ಯಾಟಿ ಅವರು ಶ್ಲಾಘಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here