ಕಲಬುರಗಿ: ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಕ್ಷೇತ್ರವು ದೇಶದ ಆರ್ಥಿಕ ಉತ್ಕರ್ಷದ ಹೊಸ್ತಿಲಲ್ಲಿದೆ. ಅದರಲ್ಲೂ ವಿಶೇಷವಾಗಿ ಭಾರತೀಯ ಆರ್ಥಿಕತೆಯ ಹೆಬ್ಬಾಗಿಲು ಜಗತ್ತಿಗೆ ತೆರೆದ ನಂತರ ಭಾರತದ ಪ್ರವಾಸೋದ್ಯಮ ಮತ್ತು ಪ್ರಯಾಣ ಕ್ಷೇತ್ರವು ಯುವಕರಿಗೆ ಲಾಭದಾಯಕ ಉದ್ಯೋಗಾವಕಾಶಗಳ ಹಲವು ಮಾರ್ಗಗಳನ್ನು ತೆರೆದಿದೆ.
ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಕ್ಷೇತ್ರದಲ್ಲಿ ಯುವಕರು ತಮ್ಮ ವೃತ್ತಿ ಜೀವನದ ಆಯ್ಕೆಗಳನ್ನು ಆರಿಸಿಕೊಳ್ಳಲು ಇದು ಸುಸಮಯ. ಮತ್ತು ಇದು ಭರವಸೆಯ ವಲಯಕ್ಕೆ ಮೆಟ್ಟಿಲು. ಈ ಮಹತ್ವದ ಮತ್ತು ಬಹುಬೇಡಿಕೆಯ ಕೋರ್ಸ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ( ಟೂರಿಸಂ ಆಂಡ್ ಟ್ರಾವೆಲ್ ಮ್ಯಾನೇಜಮೆಂಟ್ -ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ)ವಿಭಾಗದಲ್ಲಿ ಅಧ್ಯಯನ ಮಾಡಲು ಲಭ್ಯವಿದೆ. ಮೂರು ವರ್ಷದ ಅವಧಿಯ ಬ್ಯಾಚುಲರ್ ಆಫ್ ಬಿಜಿನೆಸ್ ಮ್ಯಾನೇಜಮೆಂಟ್ ( ಟೂರಿಸಂ ಆಂಡ್ ಟ್ರಾವೆಲ್- ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ) ಮತ್ತು ಎರಡು ವರ್ಷ ಅವಧಿಯ ಸ್ನಾತಕೋತ್ತರ ಪದವಿ ಇದಾಗಿದೆ.
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2000 ಕ್ಕೂ ಅಧಿಕ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ನಿಯತಕಾಲಿಕಗಳ ಸಂಪುಟಗಳ ಸಂಗ್ರಹವನ್ನು ಹೊಂದಿದೆ. ವಿದ್ಯಾರ್ಥಿಗಳ ಕಲಿಕೆಯ ಕೌಶಲ್ಯವನ್ನು ಹೆಚ್ಚಿಸಲು ಎಲ್‌ಸಿಡಿಯೊಂದಿಗೆ ಆಧುನಿಕ ಬೋಧನಾ ಸಾಧನಗಳನ್ನು ಬಳಸುವದರ ಜೊತೆಗೆ ವೈಫೈ ಸೌಲಭ್ಯಗಳನ್ನು ಹೊಂದಿದ ಕಂಪ್ಯೂಟರ್ ಲ್ಯಾಬ್ ಸಹ ವಿದ್ಯಾರ್ಥಿಗಳಿಗೆ ಶರಣಬಸವ ವಿಶ್ವವಿದ್ಯಾಲಯದ ವಿಭಾಗದಲ್ಲಿ ಲಭ್ಯವಿದೆ.