ಮೌಡ್ಯ ಮುಕ್ತ ಜೀವನ ನಮ್ಮದಾಗಲಿ : ಮಾಜಿ ಶಾಸಕ ಬಿ ಆರ್ ಪಾಟೀಲ ಅಭಿಮತ

0
48

ಕಲಬುರಗಿ: ಕೇತು ಸೂರ್ಯ ಗ್ರಹಣ ಎಂಬುದು ಸಹಜ ನೈಸರ್ಗಿಕ ಪ್ರಕ್ರೀಯೆ ಇದನ್ನು ವೈಜ್ಞಾನಿಕವಾಗಿ ಸ್ವಿಕರಿಸಬೇಕೇ ಹೊರತು ದಾರ್ಮಿಕ ಭಾವನೆಯಿಂದ ನೋಡಬಾರದೆಂದು ಜಾಗೃತಿ ಮೂಡಿಸಲು ಪ್ರಗತಿಪರ ವಿಚಾರ ಹೊಂದಿರುವವರು ಇಂದು ಕಲಬುರಗಿ ನಗರದ ಜಗತ್ ವೃತ್ತದಲ್ಲಿರುವ ವಿಶ್ವ ಗುರು ಬಸವಣ್ಣನವರ ಪುತ್ತಳಿಯ ಆವರಣದಲ್ಲಿ ಗ್ರಹಣ ಸಂದರ್ಭದಲ್ಲಿ ಉಪಹಾರವನ್ನು ಸೇವಿಸಿ ಜನರಲ್ಲಿರುವ ಗ್ರಹಣ ಎಂಬ ಭಯವನ್ನು ಹೋಗಲಾಡಿಸಲು ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು.

ಪ್ರಗತಿ ಪರ ಚಿಂತಕರು ಮಾಜಿ ಶಾಸಕರು ಆದ ಬಿ ಎರ್ ಪಾಟೀಲ ಅವರು ಮಾತನಾಡಿ ಇಂದಿನ 21 ನೇ ಶತಮಾನದಲ್ಲು ನಮ್ಮ ವಿಜ್ಞಾನಿಗಳೇ ಮೌಡ್ಯದ ಬೆನ್ನು ಬಿದ್ದಿರುವುದು ತುಂಬಾ ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ನಾವೆಲ್ಲರೂ ಕೂಡಿ ಗ್ರಹಣದ ಬಗ್ಗೆ ಜನರಲ್ಲಿರುವ ಭಯ ಮೂಡ ನಂಬಿಕೆಗಳನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಮತ್ತು ಮೌಡ್ಯ ಮುಕ್ತ ಜೀವನ ನಮ್ಮದಾಗಿಸಿಕೊಳ್ಳೋಣ ಎಂದು ಮಾರ್ಮಿಕವಾಗಿ ಮಾತನಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಲಬುರಗಿ ಬಸವಸೇವಾ ಪ್ರತಿಷ್ಟಾನದ ಅದ್ಯಕ್ಷರಾದ ಶರಣ ರಾಜಶೇಖರ ಯಂಕಂಚಿ, ಶರಣಬಸಪ್ಪ ವಾಗೆ ಅದ್ಯಕ್ಷರು ಪಿ ಎಲ್ ಡಿ ಬ್ಯಾಂಕ್ ಆಳಂದ, ಗಣೇಶ ಪಾಟೀಲ, ಸತೀಶ ಕಡಗಂಚಿ, ಲಿಂಗು ಜಾನೆ, ನಾಗೇಂದ್ರ ಕೊರೆ . ಹಣಮಂತರಾಯ ಪಾಟೀಲ ಕುಸುನೂರ, ಶಿವಶರಣ ದೇಗಾಂವ, ಸತೀಶ ಎಸ್ ಸಜ್ಜನಶೆಟ್ಟಿ. ಆರ್ ಜಿ ಶಟಗಾರ. ರವಿಕುಮಾರ ಹರಗಿ. ಅಶೋಕ ಘೂಳಿ. ಶಿವಾನಂದ ಡೋಮನಾಳ. ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here