ಗ್ರಾಮ ಆರೋಗ್ಯ ಕೇಂದ್ರದ ಸ್ವಯಂ ಸೇವಕರಿಗೆ ಕೋವಿಡ್ ತರಬೇತಿ

0
41

ಸುರಪುರ: ತಾಲೂಕು ಪಂಚಾಯತಿ ಸುರಪುರ ಹಾಗು ಅಜೀಂ ಪ್ರೇಮ್‌ಜಿ ಪೌಂಡೇಶನ್ ವತಿಯಿಂದ ನಗರದ ತಾಲೂಕು ಪಂಚಾಯತಿ ತರಬೇತಿ ಸೌಧದಲ್ಲಿ ಗ್ರಾಮ ಆರೋಗ್ಯ ಕೇಂದ್ರದ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಗಾರವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ವಿವಿರಣೆ ನೀಡಿದ ಸಂಪನ್ಮೂಲ ವ್ಯಕ್ತಿಗಳಾದ ವಿನೋದ ಕುಮಾರ ಹಾಗು ಅನ್ವರ ಜಮಾದಾರ್ ಅವರು,ಆರೋಗ್ಯ ಸ್ವಯಂ ಸೇವಕರು ಸುರಪುರ ಮತ್ತು ಹುಣಸಗಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಮನೆಯ ಸದಸ್ಯರ ಆರೋಗ್ಯ ಸಮೀಕ್ಷೆ ನಡೆಸುವ ಜೊತೆಗೆ ಎಲ್ಲರು ಕೊರೊನಾ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲಿದ್ದಾರೆ ಎಂದರು.ಅಲ್ಲದೆ ಈ ತರಬೇತಿಯಲ್ಲಿ ಸ್ವಯಂ ಸೇವಕರು ಪಲ್ಸ್ ಆಕ್ಸಿಮೀಟರ್ ಬಿಪಿ ಉಪಕರಣ ಥiಲ್ ಸ್ಕ್ಯಾನರ್ ಶುಗರ್ ಉಪಕರಣ ಬಳಕೆಯ ಬಗ್ಗೆ ತಿಳಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ತಾ.ಪಂ ಕಂಪ್ಯೂಟರ್ ಆಪರೇಟರ್ ಲತಾ ದೇಸಾಯಿ ಎಪಿಎಫ್ ತೇಜಸ್ವಿನಿ ಪಲ್ಲವಿ ಸುಶ್ಮಿತಾ ಹಾಗು ತಾಲೂಕು ಪಂಚಾಯತಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here