ರಂಗಂಪೇಟೆ:ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆರೋಪ ಸರಿಪಡಿಸಲು ಡಿಎಸ್‌ಎಸ್ ಮನವಿ

0
15

ಸುರಪುರ:ನಗರದ ರಂಗಂಪೇಟೆ ತಿಮ್ಮಾಪುರದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣಕ್ಕಾಗಿ ನಡೆದ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ, ಇದನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಮುಖಂಡರು ನಗರಸಭೆಗೆ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಗರಸಭೆ ಮುಂದೆ ಜಮಾವಣೆಗೊಂಡ ಹೋರಾಟಗಾರರು ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿಯವರಿಗೆ ಮನವಿ ಸಲ್ಲಿಸಿ,ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಡ ತೆರವುಗೊಳಿಸಿ ಕೆಲವು ಕಡೆಗಳಲ್ಲಿ ಕಡಿಮೆಗೊಳಿಸಿ ತಾರತಮ್ಯ ಎಸಗಲಾಗಿದೆ ಇದನ್ನು ಸರಿಪಡಿಸಬೇಕು ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷರು ನಿಮ್ಮ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ನಗರಸಭೆ ಸದಸ್ಯ ಶಿವಕುಮಾರ ಕಟ್ಟಿಮನಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ ಸಂಘಟನಾ ಸಂಚಾಲಕರಾದ ಶೇಖರ ಮಂಗಳೂರು ರಮೇಶ ಬಡಿಗೇರ ಬಾಚಿಮಟ್ಟಿ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ ಖಾಜಾ ಅಜ್ಮೀರ್ ಮರಲಿಂಗ ಹುಣಸಿಹೊಳೆ ಎಂ.ಪಟೇಲ್ ಮೌನೇಶ ಕಂಬಾರ ಮಾನಪ್ಪ ಶೆಳ್ಳಗಿ ಬಸವರಾಜ ಶೆಳ್ಳಗಿ ಪರಮೇಶ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here