ಪೆಟ್ರೋಲ್ ಮತ್ತು ಡೀಸೆಲ್ ದರದ ನಿರಂತರ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

0
75

ಶಹಾಬಾದ: ಪೆಟ್ರೋಲ್ ಮತ್ತು ಡೀಸೆಲ್ ದರದ ನಿರಂತರ ಏರಿಕೆಯನ್ನು ಖಂಡಿಸಿ ಶನಿವಾರ ಕಾಂಗ್ರೆಸ್ ಪಕ್ಷವು ೧೦೦ ನಾಟ್‌ಔಟ್ ಹೆಸರಿನಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ಪ್ರತಿಭಟನೆ ನಡೆಸಿ ಬೆಲೆ ಏರಿಸಿರುವ ಕೇಂದ್ರದ ವಿರುದ್ಧ ಘೋ?ಣೆಗಳನ್ನು ಕೂಗಿದರು.

ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಕರೋನಾ ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೇ ಜನಸಾಮಾನ್ಯರು ಅಂಗಾಲಾಚುವ ಭೀಕರ ಕ್ಷಾಮದ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಉರಿವ ಗಾಯಕ್ಕೆ ಉಪ್ಪು ಸವರಿದಂತೆ ಕೇಂದ್ರ ಮತ್ತು ಬಿಜೆಪಿ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ೨೫೦-೩೦೦ ಪಟ್ಟು ತೆರಿಗೆ ಹಾಕಿ ಜನರನ್ನು ಸುಲಿಗೆ ಮಾಡುತ್ತಿದೆ. ಸಂಕ?ದ ಹೊತ್ತಲ್ಲಿ ತೆರಿಗೆ ಕಡಿತ, ಅಗತ್ಯ ವಸ್ತು ಬೆಲೆ ಇಳಿಕೆ, ಪರಿಹಾರ ಪ್ಯಾಕೇಜಿನಂತಹ ಕ್ರಮಗಳ ಮೂಲಕ ಜನರ ಬದುಕಿಗೆ ಆಸರೆಯಾಗಬೇಕಿದ್ದ ಸರ್ಕಾರ, ಅದಕ್ಕೆ ತದ್ವಿರುದ್ಧವಾಗಿ ಜನರ ಸಂಕ?ದ ಹೊತ್ತಲ್ಲೇ ನಿರಂತರ ಬೆಲೆ ಏರಿಕೆಯ ಮೂಲಕ ಸುಲಿಗೆ ಮಾಡುತ್ತಿದೆ. ಇದು ಅತ್ಯಂತ ಅಮಾನವೀಯ ಮತ್ತು ಜನಕಂಟಕ ಆಡಳಿತ ಎಂದು ಹೇಳಿದರು.

Contact Your\'s Advertisement; 9902492681

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮಾತನಾಡಿ, ಕೋವಿಡ್ ಮಹಾಮಾರಿಯ ಪಿಡುಗಿನಿಂದ ಹೈರಾಣಾಗಿರುವ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರವು ಪೆಟ್ರೋಲ್-ಡೀಸಲ್ ಬೆಲೆ ಏರಿಸಿ ಗದಾ ಪ್ರಹಾರ ನಡೆಸಿದೆ. ಕಳೆದ ಒಂದು ತಿಂಗಳಿನಲ್ಲಿ ಬರೋಬ್ಬರಿ ೨೦ ಬಾರಿ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ಮೃತ್ಯುಂಜಯ್ ಹಿರೇಮಠ,ಗಿರೀಶ ಕಂಬಾನೂರ,ಸುರೇಶ ನಾಯಕ,ಇನಾಯತ ಖಾನ,ಹಾಷಮ ಖಾನ,ಶರಣಗೌಡ ಪಾಟೀಲ ಗೋಳಾ,ಕಿಶನ್ ನಾಯಕ, ಅನ್ವರ ಪಾಶಾ, ಕಿರಣ ಚವ್ಹಾಣ,ಕುಮಾರ ಚವ್ಹಾಣ,ಮ.ಜಾವೀದ್,ಮೆಹಬೂಬ ಅಪ್ಸರಾ, ಮೀರಾಜ ಸಾಹೇಬ,ನಾಗಣ್ಣ ರಾಂಪೂರೆ, ನಾಗರಾಜ ಕರಣಿಕ್,ತಿಪ್ಪಣ್ಣ ನಾಟೇಕಾರ, ಶಂಕರ ಕುಸಾಳೆ, ಸ್ನೇಹಲ್ ಜಾಯಿ,ಶ್ರವಣಕುಮಾರ, ಡಾ.ಜಹೀರ್,ಡಾ.ಅಹ್ಮದ್ ಪಟೇಲ್,ಶರಣು ಪಗಲಾಪೂರ,ಕಾಶಿನಾಥ ಜೋಗಿ, ಮಸ್ತಾನ, ಮರಲಿಂಗ, ಇಮ್ರಾನ, ಅಜರ್, ಮತೀನ್, ಪ್ರವೀಣ ರಾಜನ, ನಿಂಗಣ್ಣ ಸಂಗಾವಿಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here