ಡಾ.ಸಿದ್ದಲಿಂಗಯ್ಯವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ-ಮಲ್ಲೇಶಿ ಸಜ್ಜನ್

0
74

ಶಹಾಬಾದ : ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದ ನಾಡೋಜ ಡಾ.ಸಿದ್ದಲಿಂಗಯ್ಯನವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದಲಿತ ಮುಖಂಡ ಮಲ್ಲೇಶಿ ಸಜ್ಜನ್ ಹೇಳಿದರು.

ಅವರು ಶನಿವಾರ ನಗರದ ಕನ್ನಡ ಭವನದಲ್ಲಿ ಕಸಾಪದಿಂದ ಆಯೋಜಿಸಲಾದ ಕವಿ ಸಿದ್ದಲಿಂಗಯ್ಯನವರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಸಾವನ್ನು ಮೀರಿದ ಸಾಹಿತ್ಯದ ರಚಿಸಿದ ಕನ್ನಡದ ಶ್ರೇಷ್ಠ ಸಾಧಕ ಕವಿ ಸಿದ್ದಲಿಂಗಯ್ಯನವರು ದಲಿತ ಮೇಲೆ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆಗಳನ್ನು ಕಾವ್ಯದಲ್ಲಿ ಚಿತ್ರೀಸಿ ಬಂಡಾಯ ಕಾವ್ಯದಲ್ಲಿ ಸಂಚಲನ ಹುಟ್ಟಿಸಿ, ಕಾವ್ಯಕ್ಕೆ ಹೊಸದೊಂದು ರೂಪ ಕೊಟ್ಟವರು. ದಲಿತ ತನಗಾಗುತ್ತಿರುವ ಶೋಷಣೆಯ ವಿರುದ್ಧ ಸಿಡಿದೆದ್ದರೆ ಅದು ಹಿಂಸೆಯಲ್ಲ ಬದಲಿಗೆ ಬಂಡಾಯ ಎಂಬುದನ್ನ ಮನದಟ್ಟು ಮಾಡಿಕೊಟ್ಟವರಲ್ಲಿ ಸಿದ್ದಲಿಂಗಯ್ಯನವರು ಕೂಡ ಒಬ್ಬರು ಎಂದು ಹೇಳಿದರು.

ದಲಿತ ನಾಯಕ ಸುರೇಶ ಮೆಂಗನ್ ಮಾತನಾಡಿ, ಡಾ. ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆ ಬಗ್ಗೆ ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ ಮತ್ತು ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು.

ಪಿಎಸ್ ಕೊಕಟನೂರ್ ಮಾತನಾಡಿ, ನಾಡಿನ ಹಿರಿಯ ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ, ದಲಿತರ ಧ್ವನಿಯಾಗಿದ್ದ ಸಿದ್ದಲಿಂಗಯ್ಯ ಅವರು, ದಲಿತ ಬಂಡಾಯ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಸಾಮಾಜಿಕ ಸಮಾನತೆಯ ಕವನ ರಚಿಸಿದ್ದರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದರು ಎಂದು ಹೇಳಿದರು.

ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಕರ್, ಭರತ್ ಧನ್ನಾ,ಲೋಹಿತ್ ಕಟ್ಟಿ, ಪೂಜಪ್ಪ ಮೇತ್ರೆ, ಗುರು ರೇವಣಸಿದ್ದ ಪೂಜಾರಿ, ಕಿಶನ ನಾಯಕ, ಮರಲಿಂಗ ಕಮರಡಗಿ, ರವಿ ಬೆಳಮಗಿ, ಸುಭಾಷ ಸಾಕ್ರೆ, ಅರುಣ ಜಾಯಿ, ಶಾಂತಪ್ಪ ಹಡಪದ, ಬಸವರಾಜ ಕೊಳಕೂರ,ರಾಜೇಶ ಯನಗುಂಟಿಕರ್,ನರಸಿಂಹಲೂರಾಯಚೂರಕರ,ಮರಲಿಂಗಯಾದಗಿರಿ,ಶಿವಶರಣಪ್ಪ ವಸ್ತçದ್,ವಿಶ್ವನಾಥ ಚಿತ್ತಾಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here