ಚಿಂಚೋಳಿ: ಸೇಡಂ ಮತಕ್ಷೇತ್ರದ ಸುಲೇಪೇಟ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಬಾಲರಾಜ್ ಗುತ್ತೇದಾರ ಬ್ರಿಗೇಡ್ ಮತ್ತು ಜೆನೇಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಕುಟುಂಬಗಳಿಗೆ ಧವಸ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಕೊರೋನಾ ಸಂಕಷ್ಟ ಎದುರಾದಾಗಿನಿಂದಲೂ ಜನತೆಗೆ ನೆರವಾಗುತ್ತಿರುವ ಚಲನಚಿತ್ರ ನಟಿ ರಾಗಿಣಿ ಅವರು ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಆಹಾರ ಪದಾರ್ಥದ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ನಟಿ ರಾಗಿಣಿ ಜೆನೇಕ್ಷ ಚಾರಿಟೇಬಲ್ ಟ್ರಸ್ಟ ವತಿಯಿಂದ ಕೊರೋನಾ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಅನೇಕ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್, ಔಷದಿ, ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದು ಈಗ ಉತ್ತರ ಕರ್ನಾಟಕದಲ್ಲಿ ಪ್ರಯಾಣ ಕೈಗೊಂಡಿದ್ದು, ಕಲಬುರಗಿಯ ಸುಲೇಪೇಟ ಗ್ರಾಮದ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದ್ದೇವೆ. ಬಾಲರಾಜ್ ಗುತ್ತೇದಾರ ಅವರು ಸೇಡಂ ಮತಕ್ಷೇತ್ರದಲ್ಲಿ ಉಚಿತ 2 ಆಂಬ್ಯುಲೆನ್ಸ್ ಮೂಲಕ ಸೇವೆ. ಮತಕ್ಷೇತ್ರದ ಪ್ರತಿ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪರಣೆ. 40 ಸಾವಿರಕ್ಕೂ ಅಧಿಕ ಆಹಾರ ಪದಾರ್ಥದ ಕಿಟ್ ವಿತರಣೆ ಮಾಡುತಿರುವುದು ಶಾಘ್ಲನೀಯ ವಾಗಿದೆ ಎಂದರು
ನಂತರ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ ಕೋವಿಡ ಲಾಕ್‌ಡೌನ್ ಪರಿಣಾಮದಿಂದ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸೇಡಂ ಮತಕ್ಷೇತ್ರದ ಸುಲೇಪೇಟ ಗ್ರಾಮದ ಬಡಜನರ ಸೇವೆ ಮಾಡಲು ದೂರದ ಬೆಂಗಳೂರಿನಿಂದ ಜೆನೇಕ್ಷ ಚಾರಿಟೇಬಲ್ ಟ್ರಸ್ಟ ವತಿಯಿಂದ ನಟಿ ರಾಗಿಣಿ ಹಾಗೂ ಅವರ ತಂಡ ಇಲ್ಲಿ ಆಹಾರ ಧಾನ್ಯಗಳನ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯ ಸೇವೆ ಕೈಗೊಂಡಿದ್ದಾರೆ ಎಂದು ಹೇಳಿದರು.
.
ಈ ವೇಳೆ ಜೆಡಿಎಸ್ ಮುಖಂಡ ಎಕ್ಬಾಲ್ ಖಾನ್, ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಗೋಟೂರ, ಫಕ್ರುದ್ದೀನ್ ಚಾಂಗಲೇರ್. ಸಿದ್ದು ಸ್ವಾಮಿ, ಮೋಹಿನ್ ಮೋಮಿನ್, ಹಫಿಜ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು .