ಕಲಬುರಗಿ: ಕೇಂದ್ರ ಸರಕಾರದ ನೀತಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಹಾಗು ಮನೆಬಳಕೆಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವಾಡಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಾಲವಾರ (ಕುಂಬಾರ ಹಳ್ಳಿ ಗೇಟ್) ಪೆಟ್ರೋಲ್ ಬಂಕ್ ಹತ್ತಿರ “100 ನಾಟ್ ಔಟ್” ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶರಣು ವಾರದ, ವೀರಣ್ಣಗೌಡ ಪರಸರಡ್ಡಿ, ಪ್ರದೀಪಗೌಡ, ಚಂದ್ರ ಲೇವಡಿ, ಸಂಗು ಕುಂಬಾರಹಳ್ಳಿ, ಹೀರಾಚಂದ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ಈ ಮಧ್ಯೆ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದ್ದರಿಂದ ಜನತೆಗೆ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಪ್ರತಿಭಟನೆಕಾರರು
ಆರೋಪಿಸಿದರು.