ಅರ್ಚಕ, ಪುರೋಹಿತರ ಹಿತಕಾಯುವುದು ಅಗತ್ಯ: ಡಾ. ಕೃಷ್ಣಾಜೀ ಕುಲಕರ್ಣಿ

0
118

ಕಲಬುರಗಿ: ಸಮಾಜದ ಸರ್ವ ಜನತೆಯ ಹಿತ ಕಾಯುವ ಅರ್ಚಕರ ಹಾಗೂ ಪುರೋಹಿತರ ಕುರಿತು ಚಿಂತಿಸುವುದು ತುರ್ತು ಕಾರ್ಯವಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪೂಜೆ ಮಾಡುವ ಅರ್ಚಕ / ಪುರೋಹಿತರ ಬದುಕು ಕಷ್ಟಸಾಧ್ಯವಾಗಿದ್ದು, ಈ ದಿಶೆಯಲ್ಲಿ ಸಮಾಜ ಅವರ ಸಂಕಷ್ಟಕ್ಕೆ ಸ್ಪಂಧಿಸುವುದು ಅಗತ್ಯವಾಗಿದೆಯೆಂದು ರಾಜಕೀಯ ಧುರೀಣರಾದ ಡಾ. ಕೃಷ್ಣಾಜೀ ಕುಲಕರ್ಣಿ ಅಭಿಪ್ರಾಯಪಟ್ಟರು.

ಡಾ. ಕೃಷ್ಣಾಜೀ ಕುಲಕರ್ಣಿ ಅಭಿಮಾನಿ ಬಳಗದ ವತಿಯಿಂದ ನಗರದ ಜಗತ್ ವೃತ್ತದ ಜಗಜ್ಯೋತಿ ಬಸವೇಶ್ವರ ಮೂರ್ತಿ ಆವರಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಗುರುಪರಂಪರೆಯಲ್ಲಿರುವ ಜಂಗಮ ಅರ್ಚಕ ಪುರೋಹಿತರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ತಿಳಿಸಿಕೊಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಸಾರುತ್ತ ಸರ್ವೇ ಜನ ಸುಖಿನೋ ಭವಂತು ಎನ್ನುವ ತತ್ವವನ್ನು ಅಳವಡಿಸಿಕೊಂಡು ಲೋಕಕಲ್ಯಾಣಕ್ಕಾಗಿ ತಮ್ಮ ಬದುಕನ್ನೇ ಸಮರ್ಪಣೆ ಮಾಡಿಕೊಂಡಿರುವ ವೈದಿಕರನ್ನು ಗೌರವಿಸುವುದರ ಜೊತೆಗೆ ಅವರ ಬದುಕಿಗೆ ಒಂದಿಷ್ಟು ಆಸರೆಯಾಗುವುದು ಇಂದಿನ ಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ನುಡಿದರು.

Contact Your\'s Advertisement; 9902492681

ಅವರು ಕಲಾವಿದರು ಸಮಾಜದ ಸಂಪತ್ತಾಗಿದ್ದು, ಸಮಾಜ ಸರ್ವವ್ಯಾಪ್ತಿ ಸುಂದರವಾಗಿ ಕಾಣಲು ಕಲೆ ಮತ್ತು ಕಲಾವಿದರ ಸೇವೆ ಮುಂದಿನ ಪೀಳಿಗೆಗೆ ಜತನಾಗಿ ಕಟ್ಟಿಕೊಡುವುದು ನಮ್ಮ ಮೇಲೆ ಇರುವ ಬಹು ದೊಡ್ಡ ಜವಾಬ್ದಾರಿಯಾಗಿದ್ದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪುರಾಣ ಪ್ರವಚನದ ಮೂಲಕ ಧರ್ಮದ ಕುರಿತು, ಬದುಕಿನ ಕುರಿತು ತಿಳಿ ಹೇಳುವ ಪ್ರವಚನಕಾರರು ಹಾಗೂ ಅರ್ಚಕರು  ಬಡತನದಲ್ಲಿ ಜೀವಿಸುತ್ತಿದ್ದು ಇವರ ನೆರವಿಗೆ ಸಮಾಜ ಮತ್ತು ಸರ್ಕಾರ ಮುಂದೆ ಬರುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀ ವೆಂಕಟೇಶ  ಪಾಟೀಲ ಮಳಖೇಡ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಬ್ರಾಹ್ಮಣ ಸಮಾಜದ ಹಿರಿಯರಾದ ಚಂದ್ರಕಾಂತ ದೇಶಮುಖ, ಉದ್ದಿಮೆದಾರರಾದ ಗೋಪಾಲ ಮಳಖೇಡ, ಹಿರಿಯ ಕಲಾವಿದರಾದ ಗುರುಲಿಂಗಯ್ಯ ಶಾಸ್ತ್ರಿ ಹಿತ್ತಲಸಿರೂರ, ಸಾಹಿತಿ ಶಿವಕವಿ ಹಿರೇಮಠ ಜೋಗೂರ, ಖ್ಯಾತ ಪ್ರವಚನಕಾರರಾದ ಶರಣಕುಮಾರ ಶಾಸ್ತ್ರಿ ಹಿತ್ತಲಸಿರೂರ, ಅರವಿಂದ ಸ್ವಾಮಿ ಭೂಪಾಲ ತೆಗನೂರ, ಶಿವಕುಮಾರ ಶಾಸ್ತ್ರಿ ಧುತ್ತರಗಾಂವ, ಸೂರ್ಯಕಾಂತ ಶಾಸ್ತ್ರಿ ಧುತ್ತರಗಾಂವ, ಉದಯ ಶಾಸ್ತ್ರಿ ಭೀಮಳ್ಳಿ, ಶಿವಲಿಂಗಯ್ಯ ಶಾಸ್ತ್ರಿ ಗರೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here