ಶಹಾಬಾದ: ಅಂಗವಿಕಲರಿಗೆ ಸ್ವಾಭಿಮಾನದಿಂದ ಬದುಕಲು ಅವರಿಗೆ ಇರುವ ಸರಕಾರಿ ಇಲಾಖೆಯ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು.ಕೋವಿಡ್-೧೯ನಲ್ಲಿ ಇತರರಿಗೆ ನೀಡಿದ ಎಲ್ಲಾ ಸೌಲಭ್ಯಗಳನ್ನು ಅಂಗವಿಕಲರಿಗೂ ನೀಡಬೇಕೆಂದು ಆಗ್ರಹಿಸಿ ಸೋಮವಾರ ನಗರ ಹಾಗೂ ಗ್ರಾಮೀಣ ಮಟ್ಟದ ಅಂಗವಿಕಲತೆ ಹೋರಾಟ ಸಮಿತಿಯಿಂದ ಅರೆ ಬೆತ್ತಲೆ ಮೆರವಣಿಗೆ ನಡೆಸಿ ಗ್ರೇಡ್ ತಹಸೀಲ್ದಾರ ವೆಂಕನಗೌಡ ವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಹಾಗೂ ಗ್ರಾಮೀಣ ಮಟ್ಟದ ಅಂಗವಿಕಲತೆ ಹೋರಾಟ ಸಮಿತಿ ಅಧ್ಯಕ್ಷ ಮಲ್ಲೇಶಿ ಭಜಂತ್ರಿ ಮಾತನಾಡಿ, ಸರಕಾರ ಕೋವಿಡ್-೧೯ನಲ್ಲಿ ಅಂಗವಿಕಲರಿಗೆ ಅಲ್ಪ ಪ್ರಮಾಣದಲ್ಲಿ ಸೌಲಭ್ಯಗಳನ್ನು ಮಾತ್ರ ಸೌಲಭ್ಯ ನೀಡಿ ಕೈತೊಳೆದುಕೊಂಡು ಬಿಟ್ಟಿದೆ.ಈ ಕೂಡಲೇ ನಮ್ಮ ಬೇಡಿಕೆಗಳಾದ ಅಂಗವಿಕಲರಿಗೆ ಕಡ್ಡಾಐವಾಗಿ ಲಸಿಕೆ ಹಾಕಿಸಬೇಕು. ಜೀವನ ಉಪಯೋಗಕ್ಕಾಗಿ ಆಹಾರ ಪ್ಯಾಕೇಜ್ ಒದಗಿಸಬೇಕು. ಉದ್ಯೋಗದಲ್ಲಿ ೫ ರಿಂದ ೧೦ ಪ್ರತಿಶತಕ್ಕೆ ಏರಿಸಬೇಕು. ಸಂಕಷ್ಟದಲ್ಲಿರುವ ವಿ.ಆರ್.ಡಬ್ಲೂ ಮತ್ತು ಎಮ್.ಆರ್.ಡಬ್ಲೂ ಇವರ ವೇತನ ಹೆಚ್ಚಿಸಬೇಕು. ಯುಡಿಐಡಿ ಕಾರ್ಡ ಕಾನೂನು ಬದ್ಧವಾಗಿ ವಿತರಣೆ ಮಾಡಬೇಕು.
ಗ್ರಾಪಂ,ತಾಪಂ, ಜಿಪಂಯಲ್ಲಿ ಅಂಗವಿಕಲರಿಗೆ ಕಾಯ್ದಿರಿಸ ಅನುದಾನವನ್ನು ಪ್ರತಿ ಅಂಗವಿಕಲತರ ಅಭ್ಯರ್ಥಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು. ಅಂಗವಿಕಲರಿಗೆ ಅಭ್ಯರ್ಥಿಗಳಿಗೆ ನೀಡುತ್ತಿರುವ ಮಾಶಾಸನ ೫ ಸಾವಿರಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ವಿಶ್ವಾರಾಜ ಫೀರೋಜಬಾದ, ಶರಣು ಬನ್ನೇರ್, ಬಸವರಾಜ ತೊನಸನಹಳ್ಳಿ(ಎಸ್),ಬಸಲಿಂಗ ಮಾಲಗತ್ತಿ,ಇಬ್ರಾಹಿಂ ರಾವೂರ,ಕಮಲಾಬಾಯಿ, ಸರೂಬಾಯಿ, ವಿಜಯಲಕ್ಷ್ಮಿ, ಲಕ್ಷ್ಮಿಕಾಂತ, ಬಬಿತಾ ಸೇರಿದಂತೆ ಅನೇಕರು ಇದ್ದರು.