Monday, July 15, 2024
ಮನೆಬಿಸಿ ಬಿಸಿ ಸುದ್ದಿನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ

ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ

ಕಲಬುರಗಿ: ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಲಬುರಗಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಕಲಬುರಗಿ ಹಾಗೂ ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ (ರಿ) ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಅಂತರಜಾಲದ Zoom ಒeeಣiಟಿg ಮೂಲಕ ಹಮ್ಮಿಕೊಳ್ಳಲಾಯಿತು.

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಕವಿ ಸಿದ್ಧಲಿಂಗಯ್ಯನವರು ಕನ್ನಡದ ಬಹುದೊಡ್ಡ ಪ್ರತಿಭೆ. ಮೂರ್ತಿ ಚಿಕ್ಕದಾದರೂ ಅವರ ಕೀರ್ತಿ ಸಾಧನೆ ದೊಡ್ಡದು ಅವರನ್ನು ನಾನು ತುಂಬಾ ಹತ್ತಿರದಿಂದ ಬಲ್ಲೆ ಅವರು ನನ್ನ ಒಡನಾಟ ಅನುಗಾಲದ್ದಾಗಿತ್ತು. ಅವರ ಕಾವ್ಯ ಸೂಕ್ಷ್ಮತೆ ವಿಚಾರಗಳನ್ನು ಹಾಸ್ಯ ಮುಂತಾವಾಗಿ ಮಂಡಿಸುವ ರೀತಿ ಎಂಥವರನ್ನು ಸೂಜಿಗಲ್ಲಾಗಿ ಸೆಳೆಯವಂಥರಾಗಿತ್ತು. ಅವರ ಹೊಲೆ ಮಾದಿಗರ ಹಾಡು ಸಾವಿರಾರು ನದಿಗಳು ಹೊಸ ಕಾವ್ಯ ಮಾರ್ಗಕ್ಕೆ ಸೃಷ್ಟಿ ಅನೇಕರಿಗೆ ಮೇಲೆ ಅಚ್ಚಳಿಯ ಪ್ರಭಾವ ಬೀರಿದ ಶತಮಾನದ ಕವಿಯಾಗಿ ಕಾಣಿಸುತ್ತಾರೆ.

ಕುವೆಂಪು ನಂತರದಲ್ಲಿ ಇಷ್ಟೊಂದು ಪ್ರಭಾವ ಶಾಲಿ ಕವಿ ನಾನು ಡಾ. ಸಿದ್ಧಲಿಂಗಯ್ಯನವರಲ್ಲಿ ಕಂಡಿದ್ದೇನೆ. ದಲಿತರ ದಮನಿತರ ಬಗ್ಗೆ ಅವರ ಮಾನವೀಯ ಕಾಳಜಿ ಅನ್ಯದಶ್ಯ. ಅವರು ಪುಸ್ತಕ ಪ್ರಾಧಿಕಾರದಲ್ಲಿ ಹಾಡಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಮಾಡಿದ ಕೆಲಸ ಹಾಗೆಯೇ ಸದನದಲ್ಲಿ ಮಾಡಿದ ಭಾಷಣಗಳು ಅವರೊಳಗಿನ ಬಗ್ಗೆ ಮಾನವೀಯ ಗುಣವುಳ್ಳ ಸಾಮಾಜಿಕ ಚಿಂತನೆಯ ವ್ಯಕ್ತಿತ್ವವನ್ನು ಕಾಣುತ್ತೇವೆ. ಸಿದ್ಧಲಿಂಗಯ್ಯನವರಿಗೆ ನಾವು ಸಲ್ಲಿಸುವ ಗೌರವೆಂದರೆ ಅವರನ್ನು ಮರು ಓದಿಗೆ ಒಳಪಡಿಸಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.

ಡಾ. ಡಿ.ಜಿ. ಸಾಗರ ಅವರು ದಲಿತ ಚಳವಳಿ ಮತ್ತು ಸಿದ್ಧಲಿಂಗಯ್ಯನವರ ನಡುವೆ ಇದ್ದ ಸಂಬಂಧ ಹೋರಾಟದ ಆ ದಿನಗಳ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ನೋತಾರರು ಚಿಂತಕರು ಡಾ. ಡಿ.ಜಿ. ಸಾಗರ ಅವರು ನುಡಿ ನಮನದ ಮೂಲಕ ಸ್ಮರಿಸಿಕೊಂಡರು.

ಡಾ. ಬಸವರಾಜ ಸಬರದ ಅವರು ದಲಿತ ಬಂಡಾಯ ಸಂಘಟನೆ ಹೋರಾಟದ ಜೊತೆಯಲ್ಲಿ ಸಿದ್ಧಲಿಂಗಯ್ಯನವರ ಒಡನಾಟಕ್ಕೆ ಬಂದುದನ್ನು ನೆನಪಿಸಿಕೊಂಡ ನಾಡಿನ ಹೆಸರಾಂತ ಬಂಡಾಯ ಕವಿ, ವಿಮರ್ಶೆ ಡಾ. ಬಸವರಾಜ ಸಬರದ ಅವರು ಸಿದ್ಧಲಿಂಗಯ್ಯನವರು ನಾಡಿನ ಉತ್ತಮ ಕವಿಯಾಗಿ ಗುರುತಿಸಿಕೊಂಡರು ಆದರೆ ಅವರು ಅಷ್ಟೇ ಉತ್ತಮ ಗದ್ಯ ಬರಹಗಾರರು ಹೀನಿದ್ದು ಅವರಿಂದ ಗದ್ಯ ಬರಹ ಅಷ್ಟಾಗಿ ಬರಲಿಲ್ಲ ಅದೊಂದು ಕೊರಗು ಈಗಲೂ ಕನ್ನಡಿಗರನ್ನು ಕಾಡುತ್ತದೆ ಎಂದರು.

ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷರು ಡಾ. ಅರ್ಜುನ ಗೊಳಸಂಗಿ ಅವರು ಮಾತನಡಿ ಸಿದ್ಧಲಿಂಗಯ್ಯನವರ ಹೋರಾಟದ ಹಿಂದಿನ ಬಹುದೊಡ್ಡ ಪ್ರೇರಕ ಶಕ್ತಿ ಬಿ. ಬಸಲಿಂಪ್ಪನವರ ಬಾನಾ ಪ್ರಕರಣ ಬಿ. ಕೃಷ್ಣಪ್ಪನವರ ಹೋರಾಟ ಸಂಘಟನೆ ಆಗಿತ್ತು ಎಂದರು.

ಬೆಂಗಳೂರಿನ ಅಂಕಿತ ಪ್ರಕಾಶನದ ಪ್ರಕಾಶ ಕಂಬತ್ತಹಳ್ಳಿ ಅವರು ತಮ್ಮ ಮಾತಿನ ಸಿದ್ಧಲಿಂಗಯ್ಯನವರ ಬಾಂದವ್ಯ ಕುರಿತು ಮಾತನಾಡಿ ಅವರ ಬಹುತೇ ಪುಸ್ತಕಗಳನ್ನು ತಮ್ಮ ಪ್ರಕಾಶನವು ಹೊರತಂದದ್ದು ಮತ್ತು ಕವಿಗಳು ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ವಂದೂಮರೆಯಾಲು ಆಗದು ಅವರು ಊರುಕೇರಿ ನಾಲ್ಕನೇ ಭಾಗವನ್ನ ತಾನೇ ಮುದ್ರಿಸಬೇಕೆಂದು ಒತ್ತಾಯಿಸಿದನ್ನು ಇಲ್ಲಿ ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಮೈಸೂರಿನ ಪ್ರಾಧ್ಯಾಪಕ ಡಾ. ಚಂದ್ರಕಿರಣ ಕುಳವಾಡಿ, ಧಾರವಾಡ ಡಾ. ನಿಂಗಪ್ಪ ಮುದ್ದೇನೂರ, ವಿಜಯಪುರದ ಡಾ. ಸುಜ್ಯಾತ್ ಚಲವಾದಿ ನುಡಿ ನಮನ ಸಲ್ಲಿಸಿದರು. ಡಾ. ಕೆ.ಜಿ. ಲಕ್ಷ್ಮೀ ನಾರಾಯಣರು ಸಿದ್ಧಲಿಂಗಯ್ಯನವರ ತಮ್ಮ ಗೆಳೆತನದ ದಿನಗಳು ನೆನಪಿಸಿಕೊಂಡು ಅವರೊಳಗಿನ ಸಾಮಾಜಿಕ ಅಸಮಾನತೆ, ಶೋಷಣೆಯ ಕೆಚ್ಚು ರೋಬು ಹೇಹೆ ಕಾವ್ಯಗೊಳಿಸಿದರು ಹಂಚಿಕೊಳ್ಳಲ್ಲಿದ್ದು ಪ್ರಸಾರಗಳನ್ನು ನೆನೆದರು.

ಈ ನುಡಿ ನಮದ ಅಧ್ಯಕ್ಷತೆಯನ್ನು ವಹಿಸಿ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ದ ಅಧ್ಯಕ್ಷರು, ನಾಡಿನ ಹೆಸರಾಂತ ಕತೆಗಾರರು ಪ್ರೊ. ಎಚ್.ಟಿ. ಪೋತೆ ಅವರು ಕವಿ ಸಿದ್ಧಲಿಂಗಯ್ಯನವರ ಕಾವ್ಯ ಊರುಕೇರಿ ಗ್ರಾಮದೇವತೆಗಳಲ್ಲಿ ಮಾನವೀಯ ಮಿಡಿತವನ್ನು ಮೆಲುಕು ಹಾಕಿದರಲ್ಲದೆ ಡಾ. ಸಿದ್ಧಲಿಂಗಯ್ಯನವರನ್ನು ಟೀಕಿಸದೆ ಅವರು ಅವರ ಕೆಲಸ ಮುಂದುವರಿಸಿಕೊಂಡು ಕಾರ್ಯಕ್ರಮದ ತಾಂತ್ರಿಕ ಸಂಯೋಜನೆ ಮತ್ತು ನಿರ್ವಹಣೆ ಡಾ. ಎಂ.ಬಿ. ಕಟ್ಟಿ ಅವರು ನಿರ್ವಹಿಸಿದರು. ಸಿದ್ಧಾರ್ಥ ಚಿಮ್ಮಾ ಇದ್ಲಾಯಿ ಅವರು ಸಿದ್ಧಲಿಂಗಯ್ಯನವರ ಕ್ರಾಂತಿ ಗೀತೆಗಳನ್ನು ಹಾಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular