ಚಿತ್ತಾಪುರ: ಈ ವರ್ಷ ಮುಂಗಾರು ಮಳೆ ಜೂನ್ ಮೊದಲ ವಾರದಲ್ಲಿ ಬಂದಿರುವುದರಿಂದ ಬಿತ್ತನೆಗೆ ಸಜ್ಜಾಗಿರುವ ರೈತರಿಗೆ ಈ ಬಾರಿ ರಸಗೊಬ್ಬರದ ಕೊರತೆಯಾಗಿ ರೈತರು ಆತಂಕದಲ್ಲಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಮ್ಮ ಜಿಲ್ಲೆಗೆ ಬೇಡಿಕೆಗಿಂತಲೂ ಕಡಿಮೆ ರಸಗೊಬ್ಬರ (ಡಿಎಪಿ) ಪೂರೆಸಿದ್ದರಿಂದ ರೈತರಿಗೆ ಕೊರತೆ ಉಂಟಾಗಿದೆ.ಇದರಿಂದ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರ ಜೇಬಿಗೆ ಭಾರ ಮಾಡುತ್ತಿದ್ದಾರೆ.
ಸರ್ಕಾರ 2018 ರಲ್ಲಿ ತಯಾರಿಸಿದ ಉಪಯೋಗಿಸಲು ಯೋಗ್ಯವಲ್ಲದ ರಸಗೊಬ್ಬರವನ್ನು ಮಾರಿ ರೈತರ ಗಾಯದ ಮೇಲೆ ಬರೆ ಎಳೆಯುತ್ತಿದೆ.ಇಂತಹ ಸಮಯದಲ್ಲಿ ನಮ್ಮ ಸಂಸದರು ಕೇಂದ್ರ ಮಂತ್ರಿಗಳಿಗೆ ಪತ್ರ ಬರೆಯುದರಲ್ಲಿ ಮಗ್ನರಾಗಿರುವುದು ದುರಂತವೇ ಸರಿ ಎಂದು ಹೇಳಿದ್ದಾರೆ.
ರೈತರು ಸಂಸದರ ಕಾರ್ಯವೈಖರಿಗೆ ಶಾಪ ಹಾಕುತ್ತಿದ್ದಾರೆ.ಸಂಸದರು ಈ ಬಗ್ಗೆ ತೀವ್ರಗತಿಯಲ್ಲಿ ಆದಷ್ಟು ಶೀಘ್ರವಾಗಿ ಸ್ಪಂದಿಸಿ ಜೆಲ್ಲೆಯಲ್ಲಿ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು.ಇಲ್ಲದಿದ್ದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.