ಕಲಬುರಗಿ: ಲಾಕ್ಡೌನ್ ಹಿನ್ನೆಲೆ ಹೊರಹೋಗಲಾಗದೆ ಸಂಕಷ್ಟಕ್ಕೀಡಾಗಿರುವ ಕಲಬುರಗಿಯ ಮಂಗಳಮುಖಿಯರಿಗೆ ಹೊರವಲಯದ ತಾಜ್ ಸುಲ್ತಾನಪುರದ ಕೆ.ಎಸ್.ಆರ್.ಪಿ. ಬಟಾಲಿಯನ್ ಪಡೆಯ ಸಹಾಯಕ ಕಮಾಂಡೆಂಟ್ ಗಳಾದ ನಿಸಾರ್ ಅಹ್ಮದ್, ವೈಜನಾಥ ರೇವೂರ, ಚನ್ನಬಸವ ಅಮರಾವತಿ ಜೊತೆಗೂಡಿ ನೂರಾರು ಜನರಿಗೆ ದಿನಬಳಕೆಯ ವಸ್ತುಗಳುಳ್ಳ ಕಿಟ್ ಗಳನ್ನು ಕೊಡುವ ಮೂಲಕ ಮಾನವೀಯತೆ ಮೆರೆಯುವ ಕಾರ್ಯ ಮಾಡಿದರು.
ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದ ಕ್ರಿಯಾಶೀಲ ಗೆಳೆಯರ ಬಳಗದ ಬಳಗ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ಹಿರಿಯ ವೈದ್ಯ ಡಾ ಮಲ್ಹಾರರಾವ ಮಲ್ಲೆ, ಕಲ್ಯಾಣಕುಮಾರ ಶೀಲವಂತ, ಶರಣರಾಜ್ ಛಪ್ಪರಬಂದಿ, ಸುರೇಶ ಬಡಿಗೇರ, ರವಿಕುಮಾರ ಶಹಾಪುರಕರ್, ಮಾಲಾ ಕಣ್ಣಿ, ಮಾಲಾ ದಣ್ಣೂರ, ಮಂಜುನಾಥ ಕಂಬಳಿಮಠ, ಸಂತೋಷ ಕುಡ್ಡಳ್ಳಿ ಕಾಳಗಿ, ಶಿವರಾಜ್ ಅಂಡಗಿ ಸೇರಿದಂತೆ ಅನೇಕರಿದ್ದರು.