ಸುರಪುರ: ತಾಲೂಕಿನ ಮಾಚಗುಂಡಾಳ ಕೆರೆಯಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶುಕ್ರವಾರ ಮೋಕ್ ಡ್ರಿಲ್ ನಡೆಸಿದರು.
ಈ ಕುರಿತು ಅಗ್ನಿ ಶಾಮಕ ದಳದ ಅಧಿಕಾರಿ ಪ್ರಮೋದ ವಾಲಿ ಮಾತನಾಡಿ,ರಾಜ್ಯ ಹಾಗು ನೆರೆಯ ಮಹಾರಾಷ್ಟ್ರದ ಎಲ್ಲಾ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದ ಆಲಮಟ್ಟಿ ಡ್ಯಾಂಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು ಯಾವುದೇ ಸಂದರ್ಭದಲ್ಲಿ ಭರ್ತಿಯಾಗಿ ನದಿಗೆ ನೀರು ಹರಿಬಿಡುವ ಸಾಧ್ಯತೆ ಇರುತ್ತದೆ.
ಆದ್ದರಿಂದಾಗಿ ನಾವು ಯಾವುದೇ ಸಂದರ್ಭದಲ್ಲಾದರು ಕಾರ್ಯಪ್ರವೃತ್ತರಾಗಬೇಕಾಗಲಿದೆ.ಅದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳ ಆದೇಶದ ಮೇರೆಗೆ ಇಂದು ಈ ಮಾಚಗುಂಡಾಳ ಕೆರೆಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ಶಾಮಕ ಠಾಣೆಯ ಎಲ್ಲಾ ಸಿಬ್ಬಂದಿಗಳು ಸುಮಾರು ೨ ಗಂಟೆಗಳ ಕಾಲ ಮೋಕ್ ಡ್ರಿಲ್ ಪ್ರವಾಹ ಅಭ್ಯಾಸ ತರಬೇರಿ ನಡೆಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಡೀಲಿಂಗ್ ಪೈರ್ ಮ್ಯಾನಗಳಾದ ಮಲ್ಲಿಕಾರ್ಜುನ ಮಲ್ಲಯ್ಯ ಅಗ್ನಿಶಾಮಕರು ವೆಂಕಟೇಶ ಪ್ರಕಾಶ ಕೃಷ್ಣಾ ಸದ್ದಾಂ ಹುಸೇನ್ ಹಾಗು ಅಗ್ನಿ ಶಾಮಕ ವಾಹನ ಚಾಲಕ ಚಾಂದ್ ಮುಜೆವಾರ ಇತರರಿದ್ದರು.