ಶಹಾಬಾದ: ಲಾಕ್‌ಡೌನ್ ಸಮಯದಲ್ಲಿ ದೇವಾಲಯಗಳು ಮುಚ್ಚಿದ್ದರಿಂದ ಬಡ ಅರ್ಚಕರಿಗೆ ಎಲ್ಲಿಲ್ಲದ ತೊಂದರೆಯಾಗಿತ್ತು.ಅಂತಹ ಅರ್ಚಕರನ್ನು ಗುರುತಿಸಿ ಅವರಿಗೆ ಸಹಾಯ ಧನ ನೀಡಿ ಸನ್ಮಾನಿಸಿರುವುದು ಎಲ್ಲಿಲ್ಲದ ಸಂತೋಷ ತಂದಿದೆ ಎಂದು ವಾಡಿ-ಶಹಾಬಾದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಹೇಳಿದರು.
ಅವರು ಶುಕ್ರವಾರ ನಗರದ ಜಗದಂಬಾ ಮಂದಿರದಲ್ಲಿ ಶಾಸಕ ಬಸವರಾಜ ಮತ್ತಿಮಡು ಹಾಗೂ ಜಯಶ್ರೀ ಮತ್ತಿಮಡು ಅವರ ಮದುವೆ ವಾರ್ಷಿಕೋತ್ಸವ ಸಮಾರಂಭದ ನಿಮಿತ್ತವಾಗಿ ಬಸವರಾಜ ಮತ್ತಿಮಡು ಅಭಿಮಾನಿ ಬಳಗದಿಂದ ಬಡ ಅರ್ಚಕರಿಗೆ ಆಯೋಜಿಸಲಾದ ಸಹಾಯ ಧನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕ್‌ಡೌನ್ ಸಮಯದಲ್ಲಿ ದೇವಾಲಯಗಳು ಮುಚ್ಚಿದ್ದರಿಂದ ಅರ್ಚಕರಿಗೆ ಯಾವುದೇ ಸಂಬಳವಿಲ್ಲದೇ ತೊಂದರೆಗೆ ಒಳಗಾಗಿದ್ದರು.ಅಲ್ಲದೇ ಅವರಿಗೆ ಬೇರೆ ಯಾವುದೆ ಕೆಲಸ ಮಾಡಲು ಬರದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.ಅದನ್ನು ಅರಿತು ಶಾಸಕ ಬಸವರಾಜ ಮತ್ತಿಮಡು ಅವರ ಮದುವೆ ವಾರ್ಷಿಕೋತ್ಸವ ನೆಪದಲ್ಲಿ ಬಡ ಅರ್ಚಕರಿಗೆ ೪ ಸಾವಿರ ರೂ. ಸಹಾಯಧನ ಒದಗಿಸಿ ಅವರ ಸಂಕಷ್ಟಕ್ಕೆ ಮಿಡಿದಿರುವುದು ಶ್ಲಾಘನೀಯ ಕೆಲಸ ಎಂದರು.
ಭಾಗಿರಥಿ ಗುನ್ನಾಪೂರ, ಜ್ಯೋತಿ ಶರ್ಮಾ, ಜಯಶ್ರೀ ಸೂಡಿ, ಕನಕಪ್ಪ ದಂಡಗುಲಕರ್, ನಿಂಗಣ್ಣ ಹುಳಗೋಳಕರ್, ಅಣ್ಣಪ್ಪ ದಸ್ತಾಪೂರ,ಚಂದ್ರಕಾಂತ ದಸ್ತಾಪೂರ, ಡಾ.ಅಶೋಕ ಜಿಂಗಾಡೆ,ಅನೀಲ ಹಿಬಾರೆ,ಪರಮಾನಂದ ಯಲಗೋಡಕರ್, ಶಿವಾಜಿ ಪವಾರ, ರಾಜು ಕುಂಬಾರ, ರವಿ ರಾಠೋಡ, ಬಸವರಾಜ ಸಾತ್ಯಾಳ,ದತ್ತಾ ಫಂಡ್, ಶಿವಾನಂದ ಪಾಟೀಲ, ಮಹಾದೇವ ಗೊಬ್ಬೂರಕರ್, ಬಸವರಾಜ ಬಿರಾದಾರ,ಶ್ರೀಧರ್ ಜೋಷಿ, ಕಾಶಣ್ಣ ಚನ್ನೂರ್, ಸಂಜಯ ಕೋರೆ, ಸಂಜಯ ಸೂಡಿ, ಸಿದ್ರಾಮ ಕುಸಾಳೆ, ದತ್ತಾತ್ರೇಯ ಘಂಟಿ, ತಿಮ್ಮಣ್ಣ ಕುರುಡೆಕರ್ ಸೇರಿದಂತೆ ಅನೇಕರು ಇದ್ದರು.