ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಮೈದಾನ ಉಳಿಸಲು ಹೋರಾಟ ಅನಿವಾರ್ಯ : ಕ್ಯಾಂಪಸ್ ಫ್ರಂಟ್

0
42

ಶಿವಮೊಗ್ಗ : ಜಿಲ್ಲೆಯ ಶಿಕ್ಷಣ ಕೇಂದ್ರ ಬಿಂದು ಆಗಿರುವ ಸಹ್ಯಾದ್ರಿ ಕಾಲೇಜಿನ ಮೈದಾನವನ್ನು ಖೇಲೋ ಇಂಡಿಯಾ ಯೋಜನೆಯ ವಿಶೇಷ ಕ್ರೀಡಾ ತರಬೇತಿ ಕೇಂದ್ರಕ್ಕಾಗಿ ಆಯ್ಕೆ ಮಾಡಿದ ಜಿಲ್ಲೆಯ ಸಂಸದರ ನಿರ್ಧಾರವು ನಿರಾಶದಾಯಕವೆಂದು ಕ್ಯಾಂಪಸ್ ಫ್ರಂಟ್ ಟೀಕಿಸಿದೆ.

ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಇನ್ನೂ ಹಲವಾರು ಸಾಧಕರನ್ನು ವಿದ್ಯೆ ನೀಡಿ ಸಮಾಜಕ್ಕೆ ತನ್ನದೇ ಆದ ಅದ್ಭುತ ಕೊಡುಗೆ ನೀಡಿದ ಕೀರ್ತಿ ಸಹ್ಯಾದ್ರಿ ಕಾಲೇಜಿಗೆ ಸಲ್ಲುತ್ತದೆ. ಈ ಕಾಲೇಜಿಗೆ ಶತಮಾನದ ಇತಿಹಾಸವಿದೆ ಗಿಡಮರಗಳಿಂದ ಕೂಡಿದ ಕಾಲೇಜಿನ ಹಚ್ಚ ಹಸಿರಿನ ಪರಿಸರದ ವಾತಾವರಣವು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ತನ್ನತ್ತ ಗಮನ ಸೆಳೆಯುತ್ತದೆ. ಇದಕ್ಕೆ ಪ್ರಮುಖವಾದ ಕಾರಣ ಕಾಲೇಜಿನ ನೋಟವನ್ನು ವೈಭವಗೊಳಿಸಿರುವ ಕಾಲೇಜಿನ ಮೈದಾನವಾಗಿದೆ.

Contact Your\'s Advertisement; 9902492681

ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ, ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯಾನುಸಾರವಾಗಿ ಈಗಿರುವ ಮೈದಾನವು ಹೊಂದುವಂತಿದೆ. ಆದರೆ ಈ ಮೈದಾನವನ್ನು ಬೇರೆ ಯೋಜನೆಗಳಿಗೆ ಮಿಸಲಿಟ್ಟರೆ ಇದರಿಂದಾಗಿ ಮೂಲಸೌಕರ್ಯಗಳ ಸಮಸ್ಯೆ ಉಂಟಾಗಬಹುದು. ವ್ಯಾಸಂಗ ಮಾಡುವ ಸಾವಿರಾರು ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಲಿದೆ. ಆದ ಕಾರಣ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಿಸದೆ ಇದನ್ನು ಮೈದಾನದ ಹೊರತು ಬೇರೆಕಡೆ ಸ್ಥಳಾಂತರಿಸಬೇಕೆಂದು ಕ್ಯಾಂಪಸ್ ಫ್ರಂಟ್ ಒತ್ತಾಯಿಸುತ್ತದೆ. ಒಂದು ವೇಳೆ ಸ್ಥಳ ಬದಲಿಸದೆ ಹೋದಲ್ಲಿ ‘ಸಹ್ಯಾದ್ರಿ ಕಾಲೇಜಿನ ಮೈದಾನ ಉಳಿಸಿ’ ಎಂಬ ಆಂದೋಲನವು ಪ್ರಾರಂಭಿಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಮುಜಾಹಿದ್ ಪತ್ರಿಕಾಗೋಷ್ಠಿಯ ಮುಖಾಂತರ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಲುಕ್ಮಾನ್, ಮುಶೈದ್, ದಾದಾಪೀರ್ ಹಾಗೂ ಅಫ್ರೋಝ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here