ಟ್ರ್ಯಾಕ್ಟರ್ ಬೈಕ್ ಮದ್ಯೆ ಅಪಘಾತ ಯುವಕ ಸಾವು

0
44

ಸುರಪುರ ಟ್ರ್ಯಾಕ್ಟರ್,ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಹುಣಸಗಿ ತಾಲ್ಲೂಕಿನ ಕನಗಂಡನಹಳ್ಳಿ ಕ್ರಾಸ್ ಹತ್ತಿರ ಈ ಘಟನೆ ನಡೆದಿದ್ದು, ಅಪಘಾತದಲ್ಲಿ  ಯಲ್ಲಪ್ಪ  ಸಾಲೋಡಗಿ (17) ಎಂಬ ಯುವಕ ಸಾವನ್ನಪ್ಪಿದ್ದಾನೆ. ಹುಣಸಗಿ ತಾಲ್ಲೂಕಿನ ಮಂಜಲಾಪುರ ಹಳ್ಳಿ ಗ್ರಾಮದ ನಿವಾಸಾದ ಯಲ್ಲಪ್ಪ ಸಾಲೋಡಗಿ ಇಂದು ಮುಂಜಾನೆ ಮನೆಯಿಂದ ಬೈಕ್ ಹತ್ತಿ ಹೋಗಿದ್ದಾನೆ, ಮದ್ಹ್ಯಾನದ ವೇಳೆಗೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ.

Contact Your\'s Advertisement; 9902492681

ವಿಷಯ ತಿಳಿದು ಹುಣಸಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ  ಮೃತದೇಹವನ್ನು ಹುಣಸಗಿ ಸರ್ಕಾರಿ ಆಸ್ಪತ್ರೆಗೆರವಾನಿಸಲಾಗಿದೆ.ವಿಷಯ ತಿಳಿದು ಮೃತನ ಸಂಬಂಧಿಕರು ಹುಣಸಗಿ ಆಸ್ಪತ್ರೆಗೆ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಕುರಿತು ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹುಣಸಗಿ ಠಾಣೆ ಸಿಪಿಐ ದೌಲತ್ ಎನ್.ಕೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here