ಕಲಬುರಗಿ: ಪ್ರಸಕ್ತ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕಲುಬರಗಿ ತಾಲೂಕಿನ ಅವರಾದ (ಬಿ) ಹೋಬಳಿಯ ಆಲಗೂಡ ಗ್ರಾಮದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ್ ಅವರು ಇತ್ತೀಚೆಗೆ ರೈತರಿಗೆ ತೊಗರಿ ಪ್ರಮಾಣಿತ ಬೀಜಗಳ ಮಿನಿ ಕಿಟ್ಗಳನ್ನು ವಿತರಿಸಿದರು.
ನಂತರ ಶಾಸಕರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕ್ಷೇತ್ರಬದು ಕಾಮಗಾರಿ ವೀಕ್ಷಣೆ ಮಾಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಇವರಿಂದ ಬೀಜೋಪಚಾರ ಮತ್ತು ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಗ್ರಾಮದ ರೈತರು, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನೀಲಕಂಠ, ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಕಿಣಗಿ, ಮಲ್ಲಿಕಾರ್ಜುನ, ಬಸವರಾಜ ತಾಂತ್ರಿಕ ಸಹಾಯಕ ಸಿದ್ದಲಿಂಗ ಮತ್ತಿತರು ಉಪಸ್ಥಿತರಿದ್ದರು.