ಕಲಬುರಗಿ; ಜಿಲ್ಲಾ ಆರೋಗ್ಯ ಇಲಾಖೆಯ ವತಿಯಿಂದ ಲಸಿಕಾ ಉಗ್ರಾಣ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ಅಡಿಗಲ್ಲು ಮತ್ತು ಆಮಂತ್ರಣ ಪತ್ರಿಕೆಯಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರ ಹೆಸರು ಕೈ ಬಿಟ್ಟು ಪ್ರೋಟೋಕಾಲ್ ಉಲ್ಲಂಘಿಸಿರುವ ಸನ್ನಿವೇಶ ಜರುಗಿತು.
ವರದಿಯಾಗುತ್ತಿದ್ದಂತೆ ಇಲಾಖೆ ಎಚ್ಚೆತ್ತುಕೊಂಡ ನಂತರ ಕೈಬಿಟ್ಟಿರುವ ಗಣ್ಯರ ಹೆಸರುಗಳು ತಾತ್ಕಾಲಿಕ ಬ್ಯಾನರ್ ನಲ್ಲಿ ಸೇರಿಸೆ ಲಸಿಕಾ ಉಗ್ರಾಣ ಕೇಂದ್ರ ಉದ್ಘಾಟನಾ ಸಮಾರಂಭ ಜರುಗಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶರಣಬಸಪ್ಪ ಗಣಜಲಖೇಡ ಮಾತನಾಡಿ ಕಣ್ತಪ್ಪಿನಿಂದ ಹೆಸರು ಬಿಟ್ಟುಹೊಗಿತ್ತು. ಆದರೆ ಅದನ್ನು ಸರಿ ಪಡಿಸಿ ಮತ್ತೆ ಕಾರ್ಯಕ್ರಮ ನಡೆಸಿಕೊಡಲಾಗುವುದೆಂದು ತಿಳಿಸಿದರು.
ಶಾಸಕಿ ಕನೀಜ್ ಫಾತೀಮಾ ಮಾತನಾಡಿ, ಈ ಕುರಿತು ನನ್ನಗೆ ಯಾವುದೇ ಮಾಹಿತಿ ಇಲ್ಲ. ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಇಲ್ಲ. ಆದರಿಂದ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ನಡೆಯಬೇಕಾದ ಉದ್ಘಾಟನೆ ಕಾರ್ಯಕ್ರಮ ಸಂಜೆ ವೇಳೆ ಲಸಿಕಾ ಉಗ್ರಾಣ ಕೇಂದ್ರ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಕೆಕೆಆರ್ಡಿಬಿ ಅಧ್ಯಕ್ಷ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಶಾಸಕ ಬಸವರಾಜ್ ಮತ್ತಿಮುಡ್, ಶಾಸಕ ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ್, ಶಶೀಲ್ ನಮೋಶಿ ಸೇರಿದಂತೆ ಹಲವರು ಇದ್ದರು.