ಸುರಪುರ: ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ ಕೃಪಾ ಕಾರ್ಯಾಲಯದಲ್ಲಿ ಶಿವಾಜಿ ಮಹಾರಾಜರು ಪಟ್ಟಾಭೀಷೇಕವಾದ ದಿನದ ಅಂಗವಾಗಿ ಗುರುವಾರ ಹಿಂದೂ ಸಾಮ್ರಾಟ ದಿನವನ್ನು ಆಚರಿಸಲಾಯಿತು.ಅಲ್ಲದೆ ಕಾರ್ಯಾಲಯದ ಮೇಲೆ ಭಗವಾ ಧ್ವಜವನ್ನು ಹಾರಿಸಲಾಯಿತು.ಜೊತೆಗೆ ಭಾರತ ಮಾತಾ ಕೀ ಜೈ ಜೈ ಶ್ರೀರಾಮ ಎಂದು ಘೋಷಣೆಗಳನ್ನು ಮೊಳಗಿಸಿದರು.
ಈ ಸಂದರ್ಭದಲ್ಲಿ ಸ್ವಯಂ ಸೇವಕ ಪ್ರವೀಣ ಕಟ್ಟಿಮನಿ ಮಾತನಾಡಿ,ಶಿವಾಜಿ ಮಹಾರಾಜರು ಜೀವನ ಪೂರ್ತಿ ಹಿಂದು ಸಮಾಜಕ್ಕೆ ಅರ್ಪಣೆ ಮಾಡಿದ್ದಾರೆ.ಅದರ ಪರಿಣಾಮವಾಗಿಯೇ ಇಂದಿಗೂ ದೇಶದಲ್ಲಿ ಹಿಂದುಗಳು ಉಳಿದಿದ್ದಾರೆ,ಒಂದು ವೇಳೆ ಶಿವಾಜಿ ಮಹಾರಾಜರು ಇರಲಿಲ್ಲವೆಂದಲ್ಲಿ ಬೇರೆಯವರ ದರ್ಪಕ್ಕೆ ಬಲಿಯಾಗಬೇಕಾಗಿತ್ತು ಹಾಗು ಹಿಂದುಗಳು ಮತಾಂತರಗೊಳ್ಳುವ ಸಾಧ್ಯತೆ ಇತ್ತು.
ಆದ್ದರಿಂದ ಪ್ರತಿಯೊಬ್ಬ ಹಿಂದು ತಮ್ಮ ಮನೆಗಳಲ್ಲಿ ಶಿವಾಜಿ ಮಹಾರಾಜದ ಭಾವಚಿತ್ರ ಹಾಕಿ ನಿತ್ಯ ಅವರನ್ನು ಸ್ಮರಿಸಬೇಕೆಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಗುರುನಾಥ ರಡ್ಡಿ ನಾಗರಾಜ ಮಕಾಶಿ ಸಚಿನ ಭೀಮಣ್ಣ ಅಯ್ಯಣ್ಣ ಸುಂಗಿ ಸೇರಿದಂತೆ ಅನೇಕರಿದ್ದರು.