ಶಹಾಬಾದ: ಕೊರೊನಾದಿಂದ ಜೀವ ಉಳಿಸಿಕೊಳ್ಳಲು ತಪ್ಪದೇ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಹೇಳಿದರು.
ಅವರು ಶುಕ್ರವಾರ ನಗರದ ಜಗದಂಬಾ ಮಂದಿರದ ಆವರಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಆಯೋಜಿಸಲಾದ ಲಸಿಕಾ ಅಭಿಯಾನ ಶಿಬಿರದಲ್ಲಿ ಮಾತನಾಡಿದರು.
ಕೋವಿಡ್ ಲಸಿಕೆ ಕುರಿತು ನಿರ್ಲಕ್ಷ ಸಲ್ಲ. ವದಂತಿಗಳಿಗೆ ಕಿವಿಗೊಡದೆ ಎಲ್ಲರೂ ಲಸಿಕೆ ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿ ಪಡೆಯಬೇಕು. ಅಂಗವಿಕಲ ಹೊಂದಿದವರು ಮೊದಲು ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಸದ್ಯ ಸರ್ಕಾರ ಅಂಗವಿಕಲರಿಗೆ ಕೋವಿಡ್ ಲಸಿಕೆ ಹಾಕಲು ಮುಂದಾಗಿದ್ದು , ಎಲ್ಲರೂ ಲಸಿಕೆ ತಪ್ಪದೇ ಹಾಕಿಸಿಕೊಳ್ಳಬೇಕು.ಅಲ್ಲದೇ ಇತರರಿಗೂ ತಿಳಿಸಬೇಕು.
ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾ ವಿರುದ್ಧ ಹೋರಾಡುತ್ತದೆ. ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸಬೇಕೆಂಬ ನಿಮ್ಮ ಕನಸುಗಳಿಗೆ ನೂರೆಂಟು ವಿಘ್ನಗಳಿವೆ. ಅದಕ್ಕಾಗಿ ಸರ್ಕಾರ ನಿಮ್ಮ ನೆರವಿಗೆ ಅನೇಕ ಯೋಜನೆಗಳನ್ನು ಮಾಡಿದೆ. ಕೊರೊನಾ ಎಲ್ಲರಿಗೂ ಸಂಕ? ತಂದೊಡ್ಡಿದೆ. ಸರ್ಕಾರ ಅದನ್ನು ಸಮರ್ಥವಾಗಿ ಎದುರಿಸುತ್ತಿದೆ. ಯಾರು ಭಯಪಡುವ ಅಗತ್ಯವಿಲ್ಲ. ಮಾರ್ಗಸೂಚಿ ಪಾಲಿಸುವ ಕೆಲಸ ಮಾಡಿದರೆ ಸಾಕು ಎಂದು ಅವರು ಹೇಳಿದರು.
ಡಾ.ಸವಿತಾ ದಶರಥ ಜಿಂಗಾಡೆ ಮಾತನಾಡಿ, ಕೊರೊನಾದಿಂದ ಅಪಾಯವಾಗದಂತೆ ಮಾಡಬೇಕಾದರೆ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ.ಇದು ನಮ್ಮ ಬದುಕಿಗೆ ಜೀವ ರಕ್ಷಕವಾಗಬಲ್ಲದು ಎಂದು ಹೇಳಿದರು.
ಜಗದಂಬಾ ಮಂದಿರದ ಅಧ್ಯಕ್ಷ ದತ್ತಾತ್ರೇಯ ಜಿಂಗಾಡೆ, ದಿಲೀಪ್ ಯಲಶೆಟ್ಟಿ, ಡಾ.ದಶರಥ ಜಿಂಗಾಡೆ, ಡಾ.ಶಂಕರ, ಶರಣಬಸಯ್ಯ, ಯುಸುಫ್ ನಾಕೇದಾರ, ಪದ್ಮಾವತಿ, ಸುನೀತಾ,ಶಂಕರ, ಕಾಶಿನಾಥ ಭಾಸ್ಮೆ, ಅನಿಲ ಹಿಬಾರೆ, ಸೇರಿದಂತೆ ಅನೇಕರು ಇದ್ದರು.