ಶಹಾಬಾದ: ಶ್ರೀ ನಾಡ ಪ್ರಭು ಕೆಂಪೇಗೌಡರ ೫೧೧ನೇ ಜಯಂತಿ ಕಾರ್ಯಕ್ರಮವನ್ನು ಜೂನ್ ೨೭ ರಂದು ಜಿಲ್ಲಾಡಳಿತದ ಮೂಲಕವೇ ಆಚರಣೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಕಲಬುರಗಿ ಹಾಗೂ ಜಿಲ್ಲಾ ಕುಡ ಒಕ್ಕಲಿಗ ಸಮಾಜದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಸರ್ಕಾರ ನಾಡ ಪ್ರಭು ಕೆಂಪೇಗೌಡರ ಜಯಂತಿ ಆಚರಿಸಲು ಆದೇಶ ನೀಡಲಾಗಿದೆ.ಆದ್ದರಿಂದ ಈ ಜಯಂತಿ ಆಚರಣೆಯನ್ನು ಜಿಲ್ಲಾಡಳಿತದಿಂದಲೇ ಆಚರಿಸಬೇಕು.ಅಲ್ಲದೇ ಕಲಬುರಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಆಚರಣೆ ಮಾಡಲು ಆದೇಶಿಸಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಒಕ್ಕೂಟ ಕಲಬುರಗಿ ಹಾಗೂ ಜಿಲ್ಲಾ ಕುಡ ಒಕ್ಕಲಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಶಿವರಾಜ ಪಾಟೀಲ, ಜಿಲ್ಲಾಧ್ಯಕ್ಷ ಶಿವಯೋಗೆಪ್ಪ ಚಿತ್ತಾಪೂರ, ಪ್ರಧಾನ ಕಾರ್ಯದರ್ಶಿ ನಾಗಣ್ಣ.ಬಿ.ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಕಲ್ಯಾಣರಾವ ಧಾನೂರೆ, ಜಿಲ್ಲಾ ಕಾರ್ಯದರ್ಶಿಗಳಾದ ಗುರುನಾಥ ದೇಸಾಯಿ, ಜಗದೀಶ.ಎಸ್.ಮೊಗೊಂಡ, ಖಜಾಂಚಿ ಚಂದ್ರಕಾಂತ ಪಾಟೀಲ ಸಂತಪೂರ, ಕಾರ್ಯದರ್ಶಿ ನಾಗಪ್ಪ.ಜಿ.ಮೋಘಾ ಇತರರು ಇದ್ದರು.