ಕೊರೊನಾ ವಾರಿರ್ಯಸ್ ಗೆ ಶಾಸಕ ಬಸವರಾಜ ಮತ್ತಿಮೂಡ ಸನ್ಮಾನ

0
27

ಕಮಲಾಪೂರ: ಗ್ರಾಮೀಣ ಕ್ಷೇತ್ರದಲ್ಲಿ ಕೊರೊನಾದಲ್ಲಿಯೂ 6 ಕೋಟಿ ರೂ.ಅನುದಾನದಲ್ಲಿ ರಸ್ತೆ ನಿರ್ಮಾಣ‌ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ಮುಂದೆ ನಿಂತು ಗ್ರಾಮದ ಕೆಲಸ ತೆಗೆದುಕೊಳ್ಳುಬೇಕು ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳಿದರು.

ಹಾಗರಗಾ ತಾಡಾದಿಂದ ಶ್ರೀನಿವಾಸ ಸರಡಗಿ ರಸ್ತೆಗೆ 4 ಕೋಟಿ ರೂ. ಸರಡಗಿ ತಾಡಾದಿಂದ ಗೊಂದಕೇರಿ ತಾಂಡಾ ರಸ್ತೆಗೆ 2 ಕೋಟಿ ರೂ.ಅನುದಾನದಲ್ಲಿ ಚಾಲನೆಗೆ ನೀಡಲಾಗಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಜನರ ನಿರೀಕ್ಷೆಯಂತೆ ಕೆಲಸ ನಡೆಯಬೇಕು ಎಂದರು.ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಿಗೆ ಆಹಾರ ಕಿಟ್ ವಿತರಣೆ ಹಾಗೂ ಕೊರೊನಾ ವಾರಿರ್ಯಸ್ ಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮಹಾಗಾಂವ ಕ್ರಾಸ್ ನಲ್ಲಿ ಕೊರೊನಾ ವಾರಿರ್ಯಸ್ ಗಳಿಗೆ ಸನ್ಮಾನ ಹಾಗೂ ತಾಲೂಕಿನ ಎಲ್ಲಾ ಛಾಯಾಗ್ರಾಹಕರಿಗೆ ಆಹಾರ ಕಿಟ್ ವಿತರಿಸಿದ ಅವರು, ಗ್ರಾಮ ಮಟ್ಟದಿಂದ ಪ್ರತಿಯೊಬ್ಬರೂ ಕೊರೊನಾ ಓಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು. ಕೊರೊನಾಗೆ ಯಾವುದೇ ಭಯಪಡಬಾರದು. ಈ ಬಗ್ಗೆ ಬಿಜೆಪಿ ಮುಖಂಡರು ತಾಲೂಕಿನಲ್ಲಿ ಹಗಲಿರುಳು ಸಮಾಜದ ಸೇವೆ ಮಾಡಿದವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವುದು ಅವಶ್ಯಕವಾಗಿದೆ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ ಮಾತನಾಡಿ, ಮಹಾಗಾಂವ ಕ್ರಾಸ್ ನಲ್ಲಿ ಬಿಜೆಪಿ ಮುಖಂಡರು ಕೊರೊನಾ ವಾರಿರ್ಯಸ್ ಗೆ ಸನ್ಮಾನ ಹಾಗೂ ಛಾಯಾಗ್ರಾಹಕರಿಗೆ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ವಿಧಾನ ಮಾಜಿ ಸದಸ್ಯ ಅಮರನಾಥ ಪಾಟೀಲ ಮಾತನಾಡಿದರು. ಶಿವಕುಮಾರ್ ಪಸಾರ, ಮಲ್ಲಿಕಾರ್ಜುನ ಮರತೂರಕರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರೇಶ ಹರಸೂರಕರ್, ಚೆನ್ನವೀರಪ್ಪ ಸಲಗರ, ಗಿರೀಶ ಪಾಟೀಲ, ಶರಣಗೌಡ ಹರಕಂಚಿ, ಸಂತೋಷ ಪಾಟೀಲ ಹರಸೂರ, ಸಂತೋಷ ನಾಗನಳಿ, ಶ್ರೀಕಾಂತ್ ಪಾಟೀಲ ಮಹಾಗಾಂವ, ಬಸವರಾಜ ಜಮಾದಾರ, ಸಂತೋಷ ಜಮಾದಾರ, ಮೈನೋದ್ದೀನ್ ಮಹಾದೇವ ದಸ್ತಾಪೂರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here