ಪ್ರತಿಶತ ಸಾಧನೆಗೈದ ಪಂಚಾಯತಿಗೆ ೨೫ ಲಕ್ಷ ಅನುದಾನ: ಶಾಸಕ ರಾಜುಗೌಡ

0
23

ಸುರಪುರ: ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಪ್ರತಿಶತ ೧೦೦ರಷ್ಟು ಕೊರೊನಾ ಲಸಿಕೆ ವಿತರಣೆಗೆ ಶ್ರಮಿಸಿದ ಕೊರೊನಾ ವಾರಿಯರ್ಸ್‌ಗಳಿಗೆ ಅಭಿನಂಧನಾ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ,ಇಡೀ ಸುರಪುರ ಮತ್ತು ಹುಣಸಗಿ ತಾಲೂಕಿಲ್ಲಿ ತಿಂಥಣಿ ಗ್ರಾಮ ಪಂಚಾಯತಿ ಕೊರೊನಾ ಲಸಿಕೆ ವಿತರಣೆಯಲ್ಲಿ ಪ್ರತಿಶತ ನೂರರಷ್ಟು ಸಾಧನೆಗೈದು ರಾಜ್ಯದಲ್ಲಿ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ಇದೇ ರೀತಿಯಲ್ಲಿ ಮತಕ್ಷೇತ್ರದ ಯಾವುದೇ ಗ್ರಾಮ ಪಂಚಾಯತಿ ಮತ್ತು ಪುರಸಭೆ ಅಥವಾ ನಗರಸಭೆಯ ಯಾವುದೇ ವಾರ್ಡ್ ಕೊರನಾ ಲಸಿಕೆ ವಿತರಣೆಯಲ್ಲಿ ಪ್ರತಿಶತ ನೂರರಷ್ಟು ಸಾಧನೆ ಮಾಡಿದಲ್ಲಿ ಕೆಕೆಆರ್‌ಡಿಬಿ ಇಂದ ಬರುವ ಶಾಸಕರ ಅನುದಾನದಲ್ಲಿ ೨೫ ಲಕ್ಷ ರೂಪಾಯಿಗಳ ವಿಶೇಷ ಅನುದಾನ ನೀಡಲಾಗುವುದು.ಅದರಂತೆ ಈಗ ತಿಂಥಣಿ ಗ್ರಾಮ ಪಂಚಾಯತಿಗೆ ೨೫ ಲಕ್ಷ ನೀಡುವುದಾಗಿ ಘೋಷಿಸಿದರು.

ನಂತರ ತಿಂಥಣಿ ಗ್ರಾಮದಲ್ಲಿ ಶೇ ೧೦೦ ಲಸಿಕೆ ಹಾಕಿಸುವಲ್ಲಿ ಶ್ರಮವಹಿಸಿದ ಎಲ್ಲಾ ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗೆ ಸನ್ಮಾನಿಸಿ ಅಭಿನಂದಿಸಿದರು ಹಾಗು ಇದೇ ಸಂದರ್ಭದಲ್ಲಿ ಕೊರೊನಾ ಸಲಿಕೆ ವಿತರಣೆಯನ್ನೂ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ:ರಾಗಪ್ರಿಯ ಆರ್,ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ ಜಿಲ್ಲಾ ಆರೋಗ್ಯಾಧಿಕಾರಿ ಇಂದುಮತಿ ಕಾಮಶೆಟ್ಟಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಾ.ಪಂ ಇಒ ಅಂಬ್ರೇಶ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಸೇರಿದಂತೆ ಅನೇಕ ಜನ ಮುಖಂಡರು ಹಾಗು ಕೊರೊನಾ ವಾರಿಂiiರ್ಸ್‌ಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here