ಸಂಕಷ್ಟದಲ್ಲಿರುವ ಕಾರ್ಮಿಕರ ಕಲ್ಯಾಣಕ್ಕೆ ಸರಕಾರ ಬದ್ಧ: ದತ್ತಾತ್ರೇಯ ಸಿ ಪಾಟೀಲ್ ರೇವೂರ್

0
22

ಕಲಬುರಗಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ವತಿಯಿಂದ ಕೋವಿಡ್-19 ಲಾಕ್ಡೌನ್ ಪ್ರಯುಕ್ತ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ಹಾಗೂ ಕಾರ್ಮಿಕರು ರಕ್ಷಣೆಗಾಗಿ ಸುರಕ್ಷತಾ ಸಾಮಗ್ರಿಗಳ ಒಳಗೊಂಡ “ಸುರಕ್ಷತಾ ಕಿಟ್ಟ” ಗಳನ್ನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ ಪಾಟೀಲ್ ಅವರು ಇಂದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ವಿತರಿಸಿದರು.

ಕಿಟ್ಟ ವಿತರಿಸಿ ಮಾತನಾಡಿದ ದತ್ತಾತ್ರೇಯ ಸಿ ಪಾಟೀಲ್ ರೇವೂರ್ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಕಲ್ಯಾಣಕ್ಕಾಗಿ ಸರಕಾರವು ಬದ್ದವಿದ್ದವಾಗಿದ್ದು ಅವರ ಅಭಿವೃದ್ಧಿಯ ನಮ್ಮ ಸಂಕಲ್ಪ ಎಂದು ತಿಳಿಸಿದರು.

Contact Your\'s Advertisement; 9902492681

ಕೋವಿಡ್ 19 ಲಾಕ ಡೌನ ಪ್ರಯುಕ್ತ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿರುವ ಅನೇಕ ಕಟ್ಟಡ ಕಾರ್ಮಿಕರಿಗೆ ನೆರವಾಗಲು ಸರಕಾರವು ಕೈಗೊಂಡ ಈ ಒಂದು ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಮತ್ತು ಕಾರ್ಮಿಕ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ ಎಂದು ತಿಳಿಸಿದರು.

ಈ ಒಂದು ಆಹಾರದ ಕಿಟ್ಟಗಳಲ್ಲಿ 5 ಕೆಜಿ ಅಕ್ಕಿ, 1 ಕೆಜಿ ತೊಗರಿಬೇಳೆ, ಎರಡು ಲೀಟರ್ ಅಡುಗೆ ಎಣ್ಣೆ, ಒಂದು ಕೆಜಿ ಗೋಧಿ ಹಿಟ್ಟು, 1 ಕೆಜಿ ರವೆ, 1 ಕೆಜಿ ಉಪ್ಪು, 1 ಕೆಜಿ ಸಕ್ಕರೆ,1 ಕೆಜಿ ಅವಲಕ್ಕಿ, 200ಗ್ರಾಂ. ಸಾಂಬರ್ ಪೌಡರ ಮತ್ತು 100 ಗ್ರಾಂ ಕಾರದಪುಡಿ ಹೀಗೆ ಹತ್ತು ಬಗೆಯ ಪದಾರ್ಥಗಳು ಒಳಗೊಂಡಿದ್ದು ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದು ಅವರು ಈ ಆಹಾರ ಕಿಟ್ಟು ಜೊತೆಗೆ ಸುರಕ್ಷತಾ ಕಿಟ್ಟು ಗಳನ್ನು ವಿತರಿಸಲಾಯಿತು ಮಹಿಳೆಯರಿಗೆ ಪಿಂಕ್ ಬಣ್ಣದಿಂದ ಕೂಡಿದ ಹಾಗೂ ಪುರುಷರಿಗೆ ಕಪ್ಪು ಬಣ್ಣದಿಂದ ಕೂಡಿದ ಸುರಕ್ಷಿತ ಕಿಟ್ ಒಳಗೊಂಡಿದ್ದು ಅದರಲ್ಲಿ ಎರಡು ಬಗೆಯ ಮಾಸ್ಕ, ಡಿಟರ್ಜೆಂಟ್ ಸೋಪ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ಹಾಗೂ ಮಹಿಳೆಯರಿಗಾಗಿ ಸ್ಯಾನಿಟರಿ ಪ್ಯಾಡ್ ಒಳಗೊಂಡಿದೆ ಎಂದು ತಿಳಿಸಿದರು.

ಈ ವಿತರಣಾ ಕಾರ್ಯಕ್ರಮದಲ್ಲಿ ಮಹದೇವ ಬೆಳಮಗಿ, ಉದಯಕಿರಣ ರೇಷ್ಮೆ,ರಾಮು ಗುಮ್ಮಟ್, ಶರಣುರೆಡ್ಡಿ, ಶ್ರೀನಿವಾಸ್ ದೇಸಾಯಿ, ಕಾರ್ಮಿಕ ಇಲಾಖೆ ಉಪಯುಕ್ತವಾದ ಡಿ.ಜಿ ನಾಗೇಶ್, ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಡಾ. ದತ್ತಾತ್ರೇಯ, ಹಿರಿಯ ಕಾರ್ಮಿಕ ನಿರೀಕ್ಷಕರಾದ ರವೀಂದ್ರ ಬಲ್ಲೂರು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here