ತೋಟಗಾರಿಕೆಯ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಿ ವರ್ಗಾವಣೆ ಮಾಡುವಂಡುವಂತೆ ಮನವಿ

0
10

ಕಲಬುರಗಿ: ಜೇವರ್ಗಿ ತಾಲೂಕಿನ ರೈತರ ಜಮೀನಿನಲ್ಲಿ ತೋಟಗಾರಿಕೆಯ ಯೋಜನೆಗಳ ಬಗ್ಗೆ ರೈತರು ಕೆಲಸ ಮಾಡಿದರು ಎ.ಎಚ್.ಓ ಗಳು ಹಣ ಪಾವತಿಸುವದಿಲ್ಲ. ಸರಕಾರದ ಯೋಜನೆಗಳ ಕುರಿತು ರೈತರಿಗೆ ಸರಿಯಾಗಿ ಯೋಜನೆಗಳ ಕುರಿತು ಮಾಹಿತಿ ತಿಳಿಸುತಿಲ್ಲ. ಆದ್ದರಿಂದ ತಾಲೂಕಿನ ತೋಟಗಾರಿಕೆಯ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮವನ್ನು ಜರುಗಿಸಿ ವರ್ಗಾವಣೆಯನ್ನು ಮಾಡುವಂಡುವಂತೆ ಒತ್ತಾಯಿಸಿ ಅಹಿಂದ್ ಕಲಬುರಗಿ ವಿಭಾಗ ಸಂಚಾಲಕ ಬಸವರಾಜ ಹರವಾಳ ಅವರ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ತೋಟಗಾರಿಕೆಯ ಉಪ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಲಾಯಿತು.

ತೋಟಗಾರಿಕೆ ಇಲಾಖೆಯ ಕಛೇರಿಯ ಮುಂದೆ ರೈತರು ಜಮೀನಿನಲ್ಲಿ ಮಾಡಿದ ಕಾಮಗಾರಿಗಳ ಕುರಿತು ಹಣ ಪಾವತಿಸುವಂತೆ ಅಧಿಕಾರಿಗಳ ಸಲುವಾಗಿ ಕಛೇರಿಯ ಮುಂದೆ ಕುಳಿತರು ಅಧಿಕಾರಿಗಳು ಸಿಗುತ್ತಿಲ್ಲ. ತೋಟಗಾರಿಕೆಯ ನಿರ್ದೆಶಕರಿಗೆ ಭೇಟಿಯಾಗಿ ನಾವು ಮಾಡಿದಂತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿಗಳು ಹಾಗೂ ರಾಷ್ಟ್ರೀಯ ತೋಟಗಾರಿಕೆ ಮೀಷನ್ ಯೋಜನೆಯಡಿಯಲ್ಲಿ ಕೃಷಿ ಹೊಂಡಾ, ಪ್ಯಾಕ್ ಹೌಸ್, ಈರುಳ್ಳಿ ಶೇಕರಣ ಘಟಕ, ಪ್ರಾಥಮಿಕ ಸಂಸ್ಕೃರಣ ಘಟಕ, ಟ್ರ್ಯಾಕ್ಟರ್ ಖರೀದಿ, ಮೋಟಾರ ಇಂಜೇನ್ ಖರೀದಿ, ಕೀಟ ನಾಶಕಗಳಿಗೆ ಹಣ ಮಂಜೂರಾಗಿ ತೋಟಗಾರಿಕೆಯಲ್ಲಿ ಬೆಳೆ ಬೆಳೆಯುವದಕ್ಕೆ ಕಲ್ಲಂಗಡಿ, ನಿಂಬೆ, ಬಾಳೆ, ಪಪ್ಪಾಯಿ, ದ್ರಾಕ್ಷಿ, ಚಂಡು ಹೂ, ನುಗ್ಗೆ, ಈರುಳ್ಳಿ, ಮೆಣಸಿಕ ಕಾಯಿ, ಟೋಮ್ಯಾಟೋ ಹಲವಾರು ಬೆಳೆಗಳನ್ನು ಬೆಳೆಯುದಕ್ಕೆ ಸರ್ಕಾರ ಸಹಾಯ ಧನ ನೀಡುತ್ತದೆ ಇವುಗಳ ಯೋಜನೆಗಳ ಬಗ್ಗೆ ಸರಿಯಾಗಿ ರೈತರಿಗೆ ಮಾಹಿತಿ ನೀಡುತ್ತಿಲ್ಲ ಎಂದರು.

Contact Your\'s Advertisement; 9902492681

ತಾಲೂಕಿನ ತೋಟಗಾರಿಕೆ ಇಲಾಖೆ ಕಛೇರಿಯಲ್ಲಿ ಪ್ರತಿಯೊಂದು ಸರ್ಕಾರದ ಯೋಜನೆಗಳ ಬಗ್ಗೆ ಕಛೇರಿಯ ಮುಂದೆ ಫಲಕ ಹಾಕಬೇಕು. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ಯೋಜನೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಕೂಡ ಮಾಡುತ್ತಿಲ್ಲ. ಮೇಳವನ್ನು ಆಯೋಜಿಸಿ ಪ್ರತಿ ತಾಲೂಕಿನಲ್ಲಿ ವಾಹನಗಳ ಮೂಲಕ ಪ್ರಚಾರ ಕೂಡ ಮಾಡುತ್ತಿಲ್ಲ. ಜಾಗೃತಿ ಕಾರ್ಯಕ್ರಮಗಳ ಮೂಲಕ ಯೋಜನೆಯ ಉದ್ದೇಶ ಲಾಭವನ್ನು ರೈತರಿಗೆ ತಿಳಿಸಬೇಕು ಅದು ಕೂಡ ಮಾಡುತ್ತಿಲ್ಲ.ಪ್ರತಿ ರೈತರ ಮನೆ ಬಾಗಿಲಿಗೆ ಕರ ಪತ್ರವನ್ನು ನೀಡುವ ಮೂಲಕ ಮಾಹಿತಿ ನೀಡಿ ಆರ್ಥಿಕ ರೈತರು ಎಲ್ಲಾ ಯೋಜನೆಗಳ ಲಾಭ ಪಡೆಯುವಂತೆ ತಾಲೂಕಿನ ಅಧಿಕಾರಿಗಳು ಹೊಬಳಿ ಮಟ್ಟದ ಅಧಿಕಾರಿಗಳು, ರೈತರಿಗೆ ಮುಟ್ಟಿಸದಾಗ ಸರಕಾರದ ಯೋಜನೆಗಳ ಲಾಭಗಳನ್ನು ರೈತರು ಪಡೆಯುವಂತಾಗುತ್ತದೆ ಎಂದರು.

ಸರಕಾರದ ಎಲ್ಲಾ ಯೋಜನೆಗಳನ್ನು ಗಾಳಿಗೆ ತೂರಿ ಇಲಾಖೆಯ ಅಧಿಕರಿಗಳು ಸರಿಯಾಗಿ ದಿನಾಲು ಕಛೇರಿಗೆ ಬರದೇ ಬೇಕಾ ಬಿಟ್ಟಿ ಬಂದು ಹೋಗುತ್ತಾರೆ. ರೈತರ ಕೈಯಲ್ಲಿ ಅಧಿಕಾರಿಗಳು ಸಿಗುವುದೇ ಇಲ್ಲ ಸಿಕ್ಕರೂ ರೈತರಿಗೆ ಸರಿಯಾದ ಮಾಹಿತಿಯೇ ನೀಡುತ್ತಿಲ್ಲ ಎಂದು ಆರೋಪಿಸಿದರು.

ತೋಟಗಾರಿಕೆ ಇಲಾಖೆಯಲ್ಲಿನ ಸಿಬ್ಬಂದಿಗಳ ಮೇಲೆ ಕೂಡಲೇ ಕಾನೂನು ಶಿಸ್ತು ಕ್ರಮ ತೆಗೆದುಕೊಂಡು ವರ್ಗಾವಣೆ ಮಾಡಬೇಕು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಮಾಡಿದಂತ ಎಲ್ಲಾ ರೈತರ ಪೆಂಡಿಂಗ್ ಕಾಮಗಾರಿಗಳು ಕೂಡಲೇ ಹಣ ಪಾವತಿಸಬೇಕು. ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಬರತಕ್ಕಂತ ಎಲ್ಲಾ ಯೋಜನೆಗಳ ಫಲಾನುಭವಿಗಳ ಕಾಮಗಾರಿಗಳ ಸಹಾಯಧನ ಕೂಡಲೇ ನೀಡಬೇಕು ಹಾಗೂ ಕೋವಿಡ್-೧೯ ಕರೋನಾ ಎಂಬ ಮಹಾಮಾರಿಗೆ ವೇಳೆಯಲ್ಲಿ ರೈತರು ಬೆಳೆದಂತ ಬೆಳೆಗಳಿಗೆ ಮುಖ್ಯಮಂತ್ರಿಗಳು ಒಂದು ಹೇಕ್ಟರಿಗೆ ೧೦ ಸಾವಿರ ರೂ ಹಣ ಬಿಡುಗಡೆ ಮಾಡಿರುತ್ತಾರೆ ಆ ಹಣವನ್ನು ರೈತರಿಗೆ ಇನ್ನೂ ಯಾವ ರೈತರು ನೊಂದಣೆ ಮಾಡುವದಕ್ಕೆ ಅಧಿಕಾರಿಗಳು ತಿಳಿಸುತಿಲ್ಲಾ. ತೊಂದರೆ ಇದ್ದಂತಹ ರೈತರಿಗೆ ಸರಿಯಾದ ರೀತಿಯಲ್ಲಿ ೧೦ ಸಾವಿರ ರೂ. ರೈತರಿಗೆ ಪಾವತಿಸಬೇಕು ಎಂದು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಹಲಚೇರಿಕರ್, ಮಕ್ಬೂಲ್ ಪಟೇಲ್ ಮಲ್ಲಾಬಾದಿ, ತಿಪ್ಪಣ್ಣ ಹುಲ್ಲೂರ, ಹಬೀಬ್ ಜಮಾದಾರ, ಖಾಸಿಂ ಕೂಡಿ, ಮಹಾಂತಗೌಡ ಚನ್ನೂರ, ಈರಣ್ಣ , ಫರೀದಸಾಬ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here