ಕಲಬುರಗಿ; ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಗಳಿಕೆ ರಜೆ ನಗದೀಕರಣ ರದ್ದು ಮಾಡಿರುವ ಆದೇಶ ಹಿಂಪಡೆಯವುದು ಸೇರಿ ಅನೇಕ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಸದಸ್ಯರು, ಪಿಎಫ್, ಆರ್‌ಡಿಎ ರದ್ದುಗೊಳಿಸಿ ಎಲ್ಲ ನೌಕರರ ಪಿಂಚಣಿ ಸೌಲಭ್ಯ ನೀಡಬೇಕು, ಅವಧಿ ಪೂರ್ವ ಕಡ್ಡಾಯ ನಿವೃತ್ತಿ ಕೇಂದ್ರದ ಸುತ್ತೊಲೆ ಹಿಂಪಡೆಯಬೇಕು, ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ನೌಕರರನ್ನು ಕೂಡಲೇ ಕಾರ್ಯ ಮಾಡಬೇಕು, ನೇಮಕಾತಿ ಮೇಲಿನ ನಿಷೇಧ ತೆರವುಗೊಳಿಸಿ ಖಾಲಿ ಹುದ್ದೆ ಭರ್ತಿ ಮಾಡಬೇಕು, ಇಲಾಖೆವಾರು ವಿಲೀನ ಕೈ ಬಿಡಬೇಕು ಎನ್ನುವುದು ಸೇರಿ ಹಲವು ಬೇಡಿಕೆ ಈಡೇರಿಕೆಹೆ ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಚಿಂಚೋಳಿಕರ್, ಬಿ.ಎಸ್.ಬಾಗೋಡಿ, ಕೋದಂಡ ರಾಮಪ್ಪ, ಪ್ಪಕಾಶ ಬಿರಾದಾರ, ಮದರಿ, ರಾಚಪ್ಪ ಬಿಸಗೊಂಡ ಇತರರಿದ್ದರು.