ವೈದ್ಯರು- ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವ ಸೇನಾನಿಗಳು: ಡಾ. ಅಜಯ್ ಸಿಂಗ್ ಶ್ಲಾಘನೆ

0
21

ಕಲಬುರಗಿ: ವೈದ್ಯರು ಹಾಗೂ ಪತ್ರಿಕೋದ್ಯಮಿಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಸೇನಾನಿಗಳು ಎಂದು ಬಣ್ಣಿಸಿರುವ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಮತಕ್ಷೇತ್ರದ ಶಾಸಕರಾದ ಡಾ. ಅಜಯ್ ಸಿಂಗ್ ಸಮಾಜದ ಪ್ರಮುಖ ಅಂಗವಾಗಿರುವ ಪತ್ರಕರ್ತರು ಹಾಗೂ ವೈದ್ಯ ಸಮೂಹಕ್ಕೆ ಪ್ರತಿ ವರ್ಷ ಜುಲೈ 1 ರಂದು ಆಚರಿಸಲ್ಪಡುವÀ ವೈದ್ಯರ ದಿನ ಹಾಗೂ ಕನ್ನಡ ಪತ್ರಿಕೋದ್ಯಮ ದಿನದ ಶುಭಾಷಯಗಳನ್ನು ಕೋರಿದ್ದಾರೆ.

ಪ್ರಜಾಪ್ರಭುತ್ವದ 4 ನೇ ಅಂಗವಾಗಿ ಪತ್ರಿಕೋದ್ಯಮ ಬೆಳೆದು ನಿಂತಿದೆ. ಪ್ರಜಾಪ್ರಭುತ್ವ ಲವಲವಿಕೆಯಿಂದ ಇರಲು ಪತ್ರಿಕೋದ್ಯಮ ಸಹಕಾರಿಯಾಗಿರುತ್ತದೆ. ಪ್ರಜಾಪ್ರಭುತ್ವದ ಜೀವಂತಿಕೆ ಕಾಪಾಡುವ ಮಹತ್ತರ ಹೊಣೆಗಾರಿಕೆ ಪತ್ರಿಕೋದ್ಯಮಿಗಳು, ಪತ್ರಕರ್ತರು ಕ್ಷಣಕ್ಷಣಕ್ಕೂ ನಿಭಾಯಿಸುತ್ತಿರುತ್ತಾರೆಂದು ಪತ್ರರ್ಕರ ಹಗಲಿರುಳು ಕೆಲಸಗಳನ್ನು ಡಾ. ಅಜಯ್ ಸಿಂಗ್ ಮೆಚ್ಚಿಕೊಂಡಿದ್ದಾರೆ.

Contact Your\'s Advertisement; 9902492681

ವೈದ್ಯ ಸಮೂಹವೂ ಜನಾರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ. ಕೊರೋನಾ ಕಾಲದಲ್ಲಂತೂ ವೈದ್ಯರ ತಂಡ ಹಗಲು- ರಾತ್ರಿ ತಮ್ಮ ಜೀವ ಪಣಕ್ಕಿಟ್ಟು ಜನರ ಆರೋಗ್ಯ ರಕ್ಷಿಸಲು ಮುಂದಾಗಿ ನಿಂತಿದ್ದು ನೋಡಿದರೆ ಅವರ ಸೇವೆಯನ್ನು ನಾವೆಲ್ಲರೂ ಕೊಂಡಾಲೇಬೇಕು.  ಸಂಸ್ಕøತದ ಉಕ್ತಿಯಂತೆ ವೈದ್ಯೋ ನಾರಾಯಣೋ ಹರೀ, ವೈದ್ಯರೆಂದರೆ ಸಾಕ್ಷಾತ್ ದೇವರು ಎಂಬುದನ್ನು ಸಾಂಕ್ರಾಮಿಕ ರೋಗ ಕೋರೋನಾ ಆತಂಕದ ದಿನಗಳಲ್ಲಿ ವೈದ್ಯ ಸಮೂಹ ಸಾಬೀತು ಪಡಿಸಿ ತೋರಿಸಿದೆ.

ವೈದ್ಯರ ಸೇವೆ ಸಮಾಜದ ಜನರ ಸ್ವಾಸ್ಥ್ಯ ಕಾಪಾಡಲು ಸದಾ ಬೇಕೇಬೇಕು. ಹೀಗಾಗಿ ವೈದ್ಯರು ಹಾಗೂ ಪತ್ರಿಕೋದ್ಯಮಿಗಳಿಬ್ಬರೂ ಕೊರೋನಾ ಕಾಲದಲ್ಲಿ ಮುಂಚೂಣಿಯಲ್ಲಿದ್ದು ಜನರ ರೋಗ, ರುಜಿನೆ, ಸಮಾಜದಲ್ಲಿನ ಭೀತಿ ಹೋಗಲಾಡಿಸಲು ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸಲು ಅತ್ಯಂತ ಸಂವೇದನಶೀಲ ಹಾಗೂ ಮಹತ್ವದ ಸೇವೆ ಸಲ್ಲಿಸಿದ್ದಾರೆಂದು ಡಾ. ಅಜಯ್ ಸಿಂಗ್ ವೈದ್ಯರು- ಪತ್ರಿಕೋದ್ಯಮಿಗಳ ಸೇವಾ ಪ್ರವೃತ್ತಿಯನ್ನು ಮನಸಾರೆ ಕೊಂಡಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here