ಕಲಬುರಗಿ: ಜಿಲ್ಲೆಗೆ ಅಕ್ರಮ ಮರಳು ಸಾಗಣೆ ಮತ್ತು ಸಂಗ್ರಹದ ವಿರುದ್ಧ ಪೊಲೀಸರು ಭರ್ಜರಿ ಭೇಟೆ ನಡೆಸಿ 2 ಮರಳಿನ ಟಿಪ್ಪರ್ ಮತ್ತು 1 ಜೆಸಿಬಿ ಹಾಗೂ ನಾಲ್ವರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಮಾಡಬೂಳ ಮತ್ತು ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಾಡಬೂಳ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 400 ಮೀಟರ್ ಟನ್ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅದೇರೀತಿಯಾಗಿ ಅಫಜಲಪುರ ಠಾಣಾ ವ್ಯಾಪ್ತಿಯಲ್ಲಿ 2 ಮರಳಿನ ಟಿಪ್ಪರ್ ಮತ್ತು 1 ಜೆಸಿಬಿ ಹಾಗೂ ನಾಲ್ವರು ಚಾಲಕ ಕ್ಲೀನರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.