ಸುರಪುರ: ಕರ್ನಾಟಕದ ರಂಗ ಪರಂಪರೆಗೆ ಹಾಗೂ ನಾಟಕ ಕ್ಷೇತ್ರಕ್ಕೆ ಅನೇಕರನ್ನು ಪರಿಚಯಿಸಿ ಆ ಕ್ಷೇತ್ರದ ಬೆಳವಣಿಗೆಯಲ್ಲಿ ಕಾರ್ನಾಡರ ಕೊಡುಗೆ ಅನನ್ಯವಾಗಿದೆ ಎಂದು ಯುವ ಸಾಹಿತಿ ಶಿವಕುಮಾರ ಅಮ್ಮಾಪೂರ ಅಭಿಮತ ವ್ಯಕ್ತಪಡಿಸಿದರು.
ರಂಗಂಪೇಟೆಯ ಖಾದಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಬಳಗದ ವತಿಯಿಂದ ಆಯೋಜಿಸಿದ್ದ ಗಿರೀಶ ಕಾರ್ನಾಡರ ಸ್ಮರಣೆ ಹಾಗೂ ಸಮಗ್ರ ಸಾಹಿತ್ಯ ಅವಲೋಕನ ಕಾರ್ಯಕ್ರಮದಲ್ಲಿ ಕಾರ್ನಾಡರ ಕುರಿತು ಮಾತನಾಡಿದ ಅವರು ಯಯಾತಿ, ಹಯವದನ, ಹಿಟ್ಟಿನಹುಂಜ ಸೇರಿದಂತೆ ಅನೇಕ ಕೃತಿ ನಾಟಕಗಳನ್ನು ನಾಡಿಗೆ ಪರಿಚಯಿಸಿದ ಕಾರ್ನಾಡರು ಮಿತಭಾಷಿ ಯಾಗಿದ್ದರು, ಅವರ ಸಂಪೂರ್ಣ ಕೃತಿಯನ್ನು ಅವಲೋಕಿಸಿದಾಗ ನಮಗೆ ಪೌರಾಣಿಕಥೆ ಒಳಗಿರುವ ಮೌಡ್ಯವನ್ನು ವಿರೋಧಿಸಿದ್ದಾರೆ ಎಂದು ಸ್ಪಷ್ಟವಾಗುತ್ತದೆ.
ಕನ್ನಡ ಚಲನಚಿತ್ರ ರಂಗಕ್ಕೆ ಅನೇಕ ಉದಯೋನ್ಮೂಖ ಪ್ರತಿಭೆಗಳನ್ನು ಪರಿಚಯಿಸಿದ ಕಾರ್ನಾಡರು ತಾವುಕುಡ ನಟರಾಗಿ, ನಿರ್ಮಾಪಕರಾಗಿ, ಪೊಷಕನಟರಾಗಿ ನಟಿಸಿ ನಾಡಿನ ಗಮನ ಸೇಳೆದಿದ್ದರು. ಬಾಲ್ಯದ ಶಿರಸಿಯ ಯಕ್ಷಗಾನ ನಂತರದ ದಿನಗಳ ಧಾರವಾಡದ ನಾಟಕ ಅವರ ಮೇಲೆ ಪ್ರಭಾವ ಬಿರಿದ್ದು ವೈಚಾರಿಕತೆಯನ್ನು ಎತ್ತಿ ಸಾರಿದ್ದರು ಎಂದರು.
ಸುರಪುರ ತಾಲೂಕಾ ಸಹಾಯಕ ಖಜಾನೆ ಅಧಿಕಾರಿ ಡಾ. ಮೊನಪ್ಪ ಶಿರವಾಳ ಮಾತನಾಡಿ ಪರಿಸರದ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಿಕೊಳ್ಳಬೇಕಾಗಿದೆ ಜೊತೆಗೆ ಇಂದಿನ ವಿದ್ಯಾರ್ಥಿಗಳು ಸಾಹಿತ್ಯದ ಅಧ್ಯಾಯನದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ, ನ್ಯಾಯವಾದಿ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಬಿಲಾಲ್ ಮಖಾಂದಾರ ಕಾರ್ನಾಡರ ಸಾಹಿತ್ಯ ಕುರಿತು ವಿವರಿಸಿದರು. ಚಕೋರ ಬಳಗದ ಪ್ರತಿನಿಧಿ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಮತ್ತೊಬ್ಬ ಪ್ರತಿನಿಧಿ ವೀರಣ್ಣ ಕಲಿಕೇರಿ ಸ್ವಾಗತಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಡಾ. ಯಂಕಣ್ಣಗೌಡ ಪಾಟೀಲ್ ನಿರೂಪಿಸಿದರು, ಶರಣು ಕಾಡಂಗೇರಾ ವಂದಿಸಿದರು, ಪ್ರಮುಖರಾದ ಕನಕಪ್ಪ ವಾಗಣಗೇರಿ, ಹೆಚ್.ರಾಥೊಡ್, ಸಿದ್ದಯ್ಯಮಠ ರಂಗಂಪೇಟ, ಪ್ರಕಾಶ ಅಲಬನೂರು, ಶಂಕರ ಹುಲಕಲ್, ನಿಂಗಣ್ಣ ತಡಿಬಿಡಿ, ಶಿವಪ್ಪ ಹೆಬ್ಬಾಳ, ಶಿವಶರಣಪ್ಪ ಹೆಡಿಗಿನಾಳ, ಅಮರೇಶ ಕುಂಬಾರ, ಬಸವರಾಜ ಚನ್ನಪಟ್ನ, ಮೌನೇಶ ಐನಾಪೂರ ಸೇರಿದಂತೆ ಇತರರು ಇದ್ದರು.