ಕಲಬುರಗಿ: ಸರಣಿ ಕಳ್ಳತನ

0
105

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಕೃಷಿ ಉನ್ನತ ಮಾರುಕಟ್ಟೆಯಲ್ಲಿ ಎರಡು ಅಂಗಡಿಗಳು ಮತ್ತು ಇಜೇರಿ ಗ್ರಾಮದಲ್ಲಿ 7 ಮನೆ ಗಳಲ್ಲಿ ಸರಣಿಗಳ್ಳತನವಾಗಿ, 25 ಸಾವಿರ ನಗದು ಮತ್ತು ಕಾಗದಪತ್ರಗಳು ಕಾಣೆಯಾಗಿರುವ ಘಟನೆ ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಅಮೃತೇಶ್ವರ ಟ್ರೇಡರ್ಸ್ ಶಟರ್ ಮುರಿದು 25 ಸಾವಿರ ರೂಪಾಯಿ ನಗದು ಮತ್ತು ಭಾಗ್ಯವಂತಿ ಟ್ರೇಡಿಂಗ್ ಕಂಪನಿ ಶಟರ್ ಮುರಿದು ಚಕ್ ಬುಕ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕದೀಮರು ಕಳವು ಮಾಡಿಕೊಂಡು ಹೋಗಿದ್ದಾರೆ .ಅಡತಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಬಿ.ಎಂ ಪಾಟೀಲ್ ಚೆನ್ನೂರ್ ಹಾಗೂ ಅಂಗಡಿ ಮಾಲೀಕರ ಕಲ್ಯಾಣ್ ಕುಮಾರ್ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಏಳೆಂಟು ಮನೆಗಳು ಕಳ್ಳತನವಾಗಿದ್ದು, ಸೈದಪ್ಪ ಗುತ್ತೇದಾರ ಅವರ ಮನೆ ಬೀಗ ಮುರಿದು 100 ಗ್ರಾಂ ಚಿನ್ನ ಮತ್ತು ಸಂಗಪ್ಪ ಶಿರಸಗಿ ಅವರ ಮನೆಯಲ್ಲಿ 10 ಗ್ರಾಂ ಚಿನ್ನಾಭರಣಗಳನ್ನು ಕಳ್ಳರು ಕೈಚಳಕದಿಂದ ಮಂಗಮಾಯ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದು ಎ.ಪಿ.ಎಂ.ಸಿ ಕಾರ್ಯದರ್ಶಿ ಸವಿತಾ ರಾಥೋಡ್ ಮತ್ತು ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಸಂಗಮೇಶ್ ಅಂಗಡಿ ಮತ್ತು ಸಿಬ್ಬಂದಿಗಳು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜೇವರ್ಗಿ ಮತ್ತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here