ಯಾದಗಿರಿ: ವಡಗೇರ ತಾಲೂಕಿನ ಹಯ್ಯಾಳ ಬಿ ಗ್ರಾಮ ಪಂಚಾಯತ ಯಕ್ಷಿಂತಿ ಗ್ರಾಮದ ದಲಿತ ಕುಟುಂಬಗಳು ಸರಕಾರದ ಸೌಲಭ್ಯದಿಂದ ವಂಚಿರಾಗಿದ್ದು, ಶೀಘ್ರ ಸರಕಾರ ಇಲ್ಲಿನ ಕುಟುಂಬಗಳಿಗೆ ಮನೆಗಳು ಮಂಜೂರು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.
ಸುಮಾರು ವರ್ಷಗಳಿಂದ ಗುಡಿಸಲಿನಲ್ಲೆ ವಾಸವಾಗಿದ್ದೆವೆ ಮಳೆಗಾಲ, ಗಾಳಿಯರಬಸಕ್ಕೆ ಗುಡಿಸಲು ಹಾರಿಹೊಗುವದೇನು ಎಂಬ ಆತಂಕದಲ್ಲಿ ಬದುಕು ವಾಸಿಸಲು ಮನೆಯಿಲ್ಲ, ಕುಡಿಯಲು ನೀರಿಲ್ಲದೇ ದಲಿತರಬಾಳು ಚಿಂತಜನಕವಾಗಿದೆ.
ಗ್ರಾಮ ಪಂಚಾಯತ ಸದಸ್ಯನಿಂದ ಹಿಡಿದು ಉಸ್ತುವರಿ ಮಂತ್ರಿವರೆಗೆ ಮತ್ತು ಸಂಬಂಧ ಪಟ್ಟ ಅಧಿಕಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. 2018 ರಿಂದ ಇಲ್ಲಿಯವರೆಗೆ ಯಾವುದೆ ರೀತಿಯ ವಸತಿ ಯೋಜನೆಯ ಮನೆಗಳು ಬಂದಿಲ್ಲ SC, ST ಅನುದಾನ ಎಲ್ಲಿ ಹೊಕ್ತಾಯಿದೆ ಎಂದು ನಿಂಗಣ್ಣ ಕರಡಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಬಂದು 74 ವರ್ಷಗಳೆ ಕಳೆದರು ಯಾಕೆ ದಲಿತರಬಾಳು ಹಸನಾವಾಗಿಲ್ಲ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜನಪ್ರತಿನಿಧಿಗಳು ದಲಿತರ ಕೇರಿಗಳಿಗೆ ಬರುದಿಲ್ಲ ದಲಿತರ ಕೇರಿಗಳು ಉದ್ದಾರಾಗಲು ಇನ್ನೆಷ್ಟು ವರ್ಷಗಳು ಬೇಕು ಸಂಬಂದಪಟ್ಟ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಯಾದಗಿರಿ ಜಿಲ್ಲೆಯ ಎಲ್ಲ ಗ್ರಾಮದ ದಲಿತರ ಕೇರಿಗಳಿಗೆ ಮೂಲ ಸೌಕರ್ಯ ಒದಗಿಸಲು ಮುಂದಾಗಬೇಕೆಂದು ಎಂದು ಆಗ್ರಹಿಸಿದ್ದಾರೆ.