ಕಲಬುರ್ಗಿ: ನಗರದ ಹೀರಾಪೂರನಿಂದ್ ಶರಣಶಿರಸಗಿ ವರೆಗಿನ ಮದ್ಯವಿರುವ ಮೇಲ್ಸೇತುವೆಗೆ ಭಾರತ ದೇಶದ ಆಧುನಿಕ ಭಾರತ್ ನಿರ್ಮಾಪಕ, ದೇಶ ಕಂಡ ಮಹಾನಾಯಕ, ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಾಮಕರಣ ಮಾಡಲು ಸೂಕ್ತ ಕ್ರಮ ಜರುಗಿಸಬೇಕೆಂದು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ರವರು, ಮಹಾನಗರ ಪಾಲಿಕೆಯ ಆಯುಕ್ತರಿಗೆ ಕೋರಿರುವುದಕ್ಕೆ ದಿ.ಚಂದ್ರಶೇಖರ ಪಾಟೀಲ್ ರೇವೂರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ ಮೂಲಭಾರತಿ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮೇಲ್ಸೇತುವೆಗಳಿದಂತಾಗಿತ್ತು, ಆದರೆ ಈಗ ಮಹಾನಗರದಲ್ಲಿ ಕೆಲವು ಮೇಲ್ಸೇತುವೆಗೆಳ ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನು ಕೆಲವು ಕಾಮಗಾರಿಗಳ ಕಾರ್ಯವನ್ನು ಪ್ರಗತಿಯದ್ದು, ಅದರಲ್ಲಿ ಹೀರಾಪೂರನಿಂದ ಶರಣಸಿರಸಗಿ ವರೆಗಿನ ಮೇಲ್ಸೇತುವೆಯು ಕಲಬುರಗಿ ನಗರದಲ್ಲಿಯೇ ಅತಿ ಉದ್ದದ ಸೇತುವೆಯಾಗಲಿದ್ದು, ಅದಕ್ಕೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ನಾಮಕರಣವನ್ನು ಮಾಡುವಂತೆ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಅವರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿರುವುದು ಅತಿ ಸಂತೋಷದ ವಿಷಯವಾಗಿದೆ ಎಂದರು.