ಉಡುಪಿ; ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಲಸಿಕಾ ಅಭಿಯಾನವು ಪ್ರಾರಂಭಗೊಂಡಿದೆ. ಆದರೆ ಹಲವು ಗ್ರಾಮಾಂತರ ಹಾಗೂ ಒಳ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಬಸ್ಸುಗಳಿಲ್ಲದ ಕಾರಣ ಕಾಲೇಜುಗಳಿಗೆ ಸಂಚರಿಸಿ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಬಸ್ ಸಂಚಾರ ಆರಂಭಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕ.ರಾ.ರ.ಸಾ.ನಿ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಹಲವು ಭಾಗಗಳಿಗೆ ಸರಕಾರಿ ಬಸ್ಸುಗಳ ಸೌಲಭ್ಯವೇ ಇಲ್ಲವಾದರಿಂದ, ಅದೇರೀತಿ ಕೇವಲ ನಿಗದಿತ ಸಮಯಕ್ಕೆ ಮಾತ್ರ ಖಾಸಗಿ ಬಸ್ಸುಗಳಿದ್ದು, ತಪ್ಪಿದರೆ ಗಂಟೆಗಟ್ಟಲೆ ಕಾಯವಂತಹ ಪರಿಸ್ಥಿತಿ ಇದ್ದ ಕಾರಣ ವಿದ್ಯಾರ್ಥಿಗಳಿಗೆ ಹಾಗೂ ಊರಿನ ನಾಗರೀಕರಿಗೆ ಸಮಸ್ಯೆಯಾಗುತ್ತಿದೆ.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಎಲ್ಲಾ ಸಮಸ್ಯೆಯನ್ನು ಪರಿಗಣಿಸಿ ಜಿಲ್ಲೆಯ ಎಲ್ಲಾ ಭಾಗಕ್ಕೂ ಸರಕಾರಿ ಬಸ್ಸು ಸಂಚರಿಸುವಂತೆ, ಹಾಗೂ ಈ ಲಾಕೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಬಸ್ಸಿನ ಮೂಲಕ ಸಂಚರಿಸಿ ಲಸಿಕೆ ಪಡೆಯಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಅರ್ಫಾಝ್ ಯೂನಿಟ ಸದಸ್ಯರಾದ ತಾಬಿಶ್ ,ಸುಹೈಲ ಉಪಸ್ಥಿತರಿದ್ದರು.