ಸುರಪುರ:ನಗರದ ರಂಗಂಪೇಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಬೆಳಿಗ್ಗೆ ತಾಲೂಕಾ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಕೊರೋನಾ ಲಸಿಕಾ ಅಭಿಯಾನ ನಡೆಸಲಾಯಿತು.
ಅಭಿಯಾನ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ, ಕರೋನಾದಿಂದ ಮುಕ್ತರಾಗಲು ಪದವಿ ವಿದ್ಯಾರ್ಥಿಗಲೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು,ಲಸಿಕೆಯಿಂದ ಅಡ್ಡಪರಿಣಾಮ ಬೀರಲಿದೆ ಎಂದು ಕೆಲವು ಕಡೆಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.ಅಂತಹ ಯಾವುದಕ್ಕೂ ಕಿವಿಗೊಡದೆ ೧೮ ವರ್ಷ ಮೇಲ್ಪಟ್ಟ ಎಲ್ಲರು ಲಸಿಕೆ ಪಡೆದುಕೊಳ್ಳುವಂತೆ ಹಾಗು ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಳ್ಳುವುದರ ಮೂಲಕ ತಮ್ಮ ಕುಟುಂಬದವರಿಗು ಹಾಗೂ ತಮ್ಮ ಗ್ರಾಮದ ನೇರೆ ಹೊರೆಯವರಿಗೂ ಕೂಡ ಲಸಿಕೆ ಬಗ್ಗೆ ಸ್ವಯಂ ಪ್ರೇರಣೆಯಿಂದ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ವಿಶ್ವ ವಿದ್ಯಾಲಯದ ನಿರ್ದೇಶನದಂತೆ ಮತ್ತು ಸರಕಾರದ ಆದೇಶದ ಪ್ರಕಾರ ಕಾಲೇಜಿನ ಉಪನ್ಯಾಸಕರಿಗೆ ಸಿಬ್ಬಂದಿ ವರ್ಗಕ್ಕೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುತ್ತಿದ್ದು ಅದರ ಭಾಗವಾಗಿ ಇಂದು ಒಟ್ಟು ೪೦ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಶಾಂತು ನಾಯಕ ವೇದಿಕೆ ಮೇಲಿದ್ದರು, ಉಪನ್ಯಾಸಕರುಗಳಾದ ಬಲಭೀಮ ಪಾಟಿಲ್, ಬಿರೇಶ ಕುಮಾರ ದೇವತ್ಕಲ್, ಭಾರತಿ ಪೂಜಾರಿ, ಲಕ್ಷ್ಮೀ ಪತ್ತಾರ, ಪ್ರಮುಖರಾದ ಶ್ರೀಕಾಂತ ರತ್ತಾಳ, ದೇವರಾಜ ನಂದಗೀರಿ, ಮಹೇಶ ಬಿಶೆಟ್ಟಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸುರೇಶ ಖಾದಿ, ಸೇರಿದಂತೆ ಇತರಿದ್ದರು. ಪ್ರವೀಣ ಜಕಾತಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.