ಸುರಪುರ: ಅನ್ಯಾಯ ತಡೆಯುವಂತೆ ಪದವೀಧರ ಶಿಕ್ಷಕರ ಮನವಿ

0
7

ಸುರಪುರ: ೨೦೧೬ಕ್ಕಿಂತ ಪೂರ್ವದಲ್ಲಿ ನೇಮಕವಾಗಿರುವ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಮುಖಂಡರು ಒತ್ತಾಯಿಸಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ವಿಷಯವಾರು ಪ್ರಾಥಮಿಕ ಶಾಲಾ ೧ ರಿಂದ ೭ನೇ ತರಗತಿ ಸಹ ಶಿಕ್ಷಕರು ೨೦೧೬ಕ್ಕಿಂತಲೂ ಪೂರ್ವದಲ್ಲಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲಾ ಸಹ ಶಿಕ್ಷಕರನ್ನು ಉಲ್ಲೇಖ ೩ ರ ಅನ್ವಯ ಸಹಶಿಕ್ಷಕರೆಂದು ಪದನಾಮ ಕರಿಸಿ ಅವರ ಸೇವಾ ಜೇಷ್ಠತೆ ಮತ್ತು ವಿದ್ಯಾರ್ಹತೆಯನ್ನು ಪರಿಗಣಿಸದೇ ಹಿಂಬಡ್ತಿ ನೀಡಿದಂತಾಗಿದೆ.ಕಳೆದ ೨೦ ರಿಂದ ೨೫ ವರ್ಷಗಳಿಂದ ೬ ರಿಂದ ೮ನೇ ತರಗತಿಗಳನ್ನು ಬೋಧಿಸುತ್ತಿರುವ ಅರ್ಹ ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರಿಗೆ ಅನ್ಯಾಯವಾಗಿದೆ.ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪಡೆದಿರುವ ಪದವಿಗಳಿಗೆ ಯಾವುದೇ ಮಾನ್ಯ ಇಲ್ಲದಾಗಿದೆ.ಅಲ್ಲದೇ ಪ್ರೌಢ ಶಾಲಾ ಸಹಶಿಕ್ಷಕರ ಗ್ರೇಡ-೨ ಹುದ್ದೆಗಳಿಗೆ ಮುಂಬಡ್ತಿ ನೀಡುವಲ್ಲಿ ಸಹ ಅನ್ಯಾಯವಾಗುತ್ತಿದೆ.

Contact Your\'s Advertisement; 9902492681

ಈ ಬಗ್ಗೆ ಹಲವಾರು ಬಾರಿ ಶಾಂತಿಯುತವಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ,ಬೆಂಗಳೂರು ಫ್ರೀಡಮ್ ಪಾರ್ಕ್ ಚಲೋ ಹೋರಾಟ ಶೈಕ್ಷಣಿಕ ಸಮಾವೇಶ ಸಾಂಕೇತಿಕ ಧರಣಿ ಮತ್ತು ತರಗತಿ ಬಹಿಷ್ಕಾರದಂತಹ ಹೋರಾಟಗಳನ್ನು ಹಮ್ಮಿಕೊಂಡು ಪ್ರತಿಭಟಿಸಿದಾಗ್ಯೂ ಸಹ ಇಲಾಖೆಯ ವಿಳಂಬ ಧೋರಣೆ ಅನುಸರಿಸುತ್ತಾ ಬಂದಿದೆ.ಆದ್ದರಿಂದ ಉಲ್ಲೇಖ ೩ ಮತ್ತು ೪ಕ್ಕೆ ತಿದ್ದುಪಡಿ ಮಾಡಿ ತುರ್ತಾಗಿ ನ್ಯಾಯ ಒದಗಿಸದೆ ಇದ್ದಲ್ಲಿ ನಾವು ೬ ರಿಂದ ೮ನೇ ತರಗತಿಗಳು ಭೌತಿಕವಾಗಿ ಪ್ರಾರಂಭವಾದ ನಂತರ ದಿನಗಳಲ್ಲಿ ೬ ರಿಂದ ೮ನೇ ತರಗತಿಗಳ ಪಾಠ ಬೋಧನಾ ಬಹಿಷ್ಕಾರ ಹೋರಾಟ ಮತ್ತು ಮುಂದಿನ ದಿನಗಳಲ್ಲಿ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ನಂತರ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ,ಪ್ರಧಾನ ಕಾರ್ಯದರ್ಶಿ ಶರಣು ಗೋನಾಲ,ಜಿಲ್ಲಾ ಖಜಾಂಚಿ ಸಂಜೀವ ದರಬಾರಿ,ಸದಸ್ಯರಾದ ಭೀಮಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here