ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಮೀಸಲಾತಿ ಹಂಚಿಕೆ ಸರಿಪಡಿಸಿ: ಉಸ್ತಾದ ವಜಾಹತ್

0
11

ಸುರಪುರ: ಈ ಬಾರಿಯ ಜಿಲ್ಲಾ ಪಂಚಾಯತಿ ಚುನಾವಣೆ ಅಂಗವಾಗಿ ಘೋಷಣೆ ಮಾಡಲಾಗಿರುವ ಮೀಸಲಾತಿ ಹಂಚಿಕೆಯಲ್ಲಿ ಆದ ಅನ್ಯಾಯವನ್ನು ಸರಿಪಡಿಸುವಂತೆ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ್ ಒತ್ತಾಯಿಸಿದರು.

ನಗರದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರರನ್ನು ಭೇಟಿ ಮಾಡಿ ಮಾತನಾಡಿ,ಸುರಪುರ ಮತಕ್ಷೇತ್ರದ ಎಲ್ಲಾ ೮ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ೭ ಸ್ಥಾನಗಳು ಮಹಿಳೆಯರಿಗೆ ಮತ್ತು ೧ ಸ್ಥಾನ ಪುರುಷರಿಗೆ ಎಂದು ಘೋಷಣೆ ಮಾಡಿರುವುದು ಅನ್ಯಾಯ.ಕಾನೂನಿನಂತೆ ಪ್ರತಿಶತ ೫೦ ರಷ್ಟು ಮಹಿಳೆಯರಿಗೆ ಮೀಸಲಿಡಲು ನಮ್ಮ ಅಭ್ಯಾಂತರವಿಲ್ಲ.ಅದರಂತೆ ಮಹಿಳೆಯರಿಗೆ ೪ ಸ್ಥಾನ ಮತ್ತು ಪುರುಷರಿಗೆ ೪ ಸ್ಥಾನ ನೀಡಿದರೆ ತೊಂದರೆಯಿಲ್ಲ.ಆದರೆ ಮಹಿಳೆಯರಿಗೆ ೭ ಸ್ಥಾನ ನೀಡಿರುವುದು ಅನ್ಯಾಯವಾಗಿದೆ.ಆದ್ದರಿಂದ ಈಗ ಆಗಿರುವ ಅನ್ಯಾರವನ್ನು ಸರಿಪಡಿಸಬೇಕು,ಇಲ್ಲವಾದಲ್ಲಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಚುನಾವಣಾ ಆಯೋಗಕ್ಕೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ,ಮಲ್ಲನಗೌಡ ಬಾಚಿಮಟ್ಟಿ,ದೇವರಾಜ ಕಕ್ಕೇರಾ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here