ಕಲಬುರಗಿ: ಮಾನವಿಯತೆಯಆಧಾರದ ಮೇಲೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವೆ ಬಸವ ಚಳುವಳಿಯ ಮೂಲ ಉದ್ದೇಶವಾಗಿತ್ತು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಸವರಾಜ ಡೋಣೂರ ಹೇಳಿದರು.
ಕಲಬುರಗಿಯ ಬಸವ ಸಮಿತಿ ಆಯೋಜಿಸಿದ ೬೭೭ ನೆಯಅರಿವಿನ ಮನೆ ಕಾರ್ಯಕ್ರಮದಲ್ಲಿ ಬಸವಣ್ಣವರ ಸಾಮಾಜಿಕ ಪರಿಕಲ್ಪನೆಕುರಿತು ಮಾತನಾಡಿದರು.ಅವರು ಮುಂದುವರೆದು ಮಾತನಾಡಿ ಬಸವಣ್ಣನವರಅಗಾಧವಾದ ಮುಂದಾಲೋಚನೆಯುಳ್ಳವರಾಗಿದ್ದರು ಹಾಗೂ ಸಮಾನತೆಯಆಧಾರದ ಮೇಲೆ ಉತ್ತಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು.ಅಂದಿನ ಸಮಾಜದ ಅನಿಷ್ಠಗಳಾದ ಜಾತಿ ಪದ್ದತಿ, ಮೂಡನಂಬಿಕೆ, ಅಸಮಾನತೆ, ಲಿಂಗಬೇದ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ತಾರತಮ್ಯಗಳು ಅವರ ಮನಸಿನ ಮೇಲೆ ಅಗಾಧ ಪರಿಣಾಮಗಳನ್ನು ಬೀರಿದ್ದವು.ಆದ್ದರಿಂದಅವರು ಇವುಗಳ ನಾಶಕ್ಕಾಗಿ ಕಹಳೆ ಉದಿದ ಮೊದಲ ಶರಣಚಿಂತಕರಾಗಿದ್ದಾರೆ.ಆದ್ದರಿಂದಲೇಅವರು ’ಇವನಾರವ, ಇವನಾರವಎನ್ನದೆ, ಇವನಮ್ಮವಇವನಮ್ಮವ’ಎಂದೆನ್ನಬೇಕೆಂದು ಹೇಳಿದರು.ವಚನ ಸಾಹಿತ್ಯ ಮರಾಠಿ ಅಥವಾ ಇಂಗ್ಲೀಷಿಗೆ ಅನುವಾದಗೊಂಡು ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಮುಟ್ಟಿದ್ದರೆ ಇಂದಿನ ನಮ್ಮ ಸಂವಿಧಾನದದ ಸ್ವರೂಪಇನ್ನಿಷ್ಟು ಬದಲಾಗುತ್ತಿತ್ತು.ಈಗಾಗಲೇ ನಮ್ಮ ಸಂವಿಧಾನದಲ್ಲಿ ಶರಣರ ಅನೇಕ ಸಂದೇಶಗಳು ಮೂಡಿಬಂದಿವೆ.
ಧರ್ಮ ಸುದಾರಣೆ, ಜಾತಿ ನಿರ್ಮೂಲನೆ, ಕಾಯಕ ಸಿದ್ದಾಂತದ ಬಗ್ಗೆ ಹೆಮ್ಮೆ, ಸ್ತ್ರೀಸಮಾನತೆ, ಜನರ ನೈತಿಕ ಮಟ ಸುದಾರಣೆ ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಸಾಮಾನ್ಯರ ಪ್ರವೇಶ, ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ, ಅಹಿಂಸೆಗಳು ಬಸವಣ್ಣನವರು ಕಟ್ಟಬಯಸಿದ ಸಮಾಜದ ಸ್ವರೂಪಗಳಾಗಿದ್ದವು.ಏಕದೇವೋಪಾಸಕನಾಗಿದ್ದ ಬಸವಣ್ಣನವರಿಗೆಗುಡಿಗುಂಡಾರದಲ್ಲಿ ನಂಬಿಕೆಯಿರಲಿಲ್ಲ, ಏಕೆಂದರೆ ಅವು ಪುರೊಹಿತಶಾಹಿ ಮತ್ತು ಭೇದಭಾವ ಮಾಡುವ ಕೇಂದ್ರಗಳಾಗಿದ್ದವು.ದೇವರನ್ನುಕಾಣಲುಗುಡಿಗೆ ಹೋಗಬೇಕಾಗಿಲ್ಲ ದೇವರು ಎಲ್ಲರಲ್ಲಿಯು ಇದ್ದಾನೆ, ಅಂತರಂಗ ಮತ್ತು ಬಹಿರಂಗ ಸುದ್ದಿಯ ಮೂಲಕ ದೇವರನ್ನುಕಾಣುವ ಭಕ್ತಿಮಾರ್ಗವನ್ನುಅವರು ಸೂಚಿಸಿದರು.
ಅದಕ್ಕಾಗಿ ಬಸವಣ್ಣನವರು ಶರಣರಾದವರಲ್ಲಿ ಪರಧನ, ಪರಸ್ತ್ರೀಯನೊಲ್ಲೆನೆಂಬ ಚಲವಿರಬೇಕು, ಆಲಸಿ ಜೀವನ ಬಿಟ್ಟುಕಾಯಕಯೋಗಿಯಾಗಿರಬೇಕು, ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಬೇಕು, ಪರನಿಂದೆ ಮಾಡದೆ, ಸಕಲ ಜೀವಿಗಳಿಗೆ ದಯೆಯನ್ನುತೋರುವ ಮೂಲಕ ಆದರ್ಶ ಸಮಾಜದಿಂದಕೂಡಿದಕಲ್ಯಾಣ ನಾಡನ್ನುಕಟ್ಟ ಬಹುದೆಂದು ಹೇಳಿದರು.
ಈ ಸಂದರ್ಭದಲ್ಲಿ ಬಸವ ಸಮಿತಿ, ಕಲಬುರಗಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ, ಡಾ. ವಿಕ್ರಮ ವಾಸಾಜಿ, ಡಾ.ಗಣಪತಿ ಸಿನ್ನೂರ, ಅಂತರಜಾಲದಲ್ಲಿ ಸಾವಿರಾರು ಬಸವಾಭಿಮಾನಿಗಳು ಕಾರ್ಯಕ್ರಮವನ್ನು ವಿಕ್ಷಿಸಿದರು.ಶ್ರೀ ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.