ಬಿಜೆಪಿ ಸಿದ್ಧಾಂತಗಳಿಗೆ ಒಪ್ಪಿಕೊಂಡು ಬಂದರೆ ಸ್ವಾಗತಿಸುತ್ತೆವೆ: ಮತ್ತಿಮಡು

0
211

ಶಹಾಬಾದ: ವ್ಯಯಕ್ತಿಕ ನಿರೀಕ್ಷೆಗಳನ್ನು ಇಟ್ಟಕೊಂಡು ಬರದೇ, ಬಿಜೆಪಿ ಸಿದ್ಧಾಂತಗಳಿಗೆ ಒಪ್ಪಿಕೊಂಡು ಬರುವುದಿದ್ದರೇ ಅದಕ್ಕೆ ನಾವು ಯಾವಾಗಲೂ ಸ್ವಾಗತಿಸುತ್ತೆವೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಗೋಳಾ(ಕೆ) ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡು ಮಾತನಾಡಿದರು.

Contact Your\'s Advertisement; 9902492681

ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರ ಜನಪರವಾದ ಕೆಲಸಗಳನ್ನು ನೋಡಿ ಈಗಾಗಲೇ ಹಲವಾರು ಜನರು ಪಕ್ಷದ ಸಿದ್ಧಾಂತಗಳಿಗೆ ಒಪ್ಪಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಪಕ್ಷಕ್ಕೆ ಸೇರ್ಪಡೆಗೊಂಡ ಎಲ್ಲಾ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಒತ್ತು ನೀಡಬೇಕು. ಮುಂಬರುತ್ತಿರುವ ತಾಪಂ, ಜಿಪಂ ಚುನಾವಣೆಯಲ್ಲಿ ಗೆಲುವು ನಮ್ಮದಾಗಬೇಕೆಂದು ಹೇಳಿದರು.

ತೊನಸನಹಳ್ಳಿ(ಎಸ್) ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ ಗಂಗಭೋ, ರವಿ ಸಣತಮ್, ವಿಜಯಾನಂದ ಮಾಣಿಕ್, ಶಾಂತಕುಮಾರ ಮಾಣಿಕ,ಸಿದ್ದು ಮಾಣಿಕ, ನೇತೃತ್ವದಲ್ಲಿ ಸುಮಾರು 30 ಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಾಗರಾಜ ಮೇಲಗಿರಿ,ಡಿ.ಸಿ.ಹೊಸಮನಿ, ರವಿ ರಾಠೋಡ, ನಿಂಗಣ್ಣ ಹುಳಗೋಳಕರ,ಉಪಾಧ್ಯಕ್ಷರಾದ ದುರ್ಗಪ್ಪ ಪವಾರ, ಮಹಾದೇವ ಗೊಬ್ಬುರಕರ, ಪಾರ್ವತಿ ಪವಾರ,ದತ್ತಾ ಫಂಡ,ಮಹಿಳಾ ಅಧ್ಯಕ್ಷೆ ಜಯಶ್ರೀ ಸೂಡಿ,ನೀಲಗಂಗಮ್ಮ ಘಂಟ್ಲಿ, ಶಿವು ನಾಯಕಲ್, ರಾಮಕುಮಾರ,ವಿಶ್ವರಾಜ, ಪ್ರಸನ್ನ, ಶಶಿಕಾಂತ, ಮಹೇಶ,
ಕುಶಾಲ, ಹಿರಿಗಪ್ಪ, ಶಾಂತಾಬಾಯಿ, ಫ್ರಭು, ಮೀನಾಕ್ಷಿ, ಸುನಿತಾ,ಸುಶಿಲಾಬಾಯಿ, ಲಲಿತಾ, ಜಯಶ್ರೀ, ಶಂಕ್ರೇಮ್ಮ, ಶರಣಮ್ಮ,ರಾಹುಲ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here