ಕಲ್ಯಾಣ ಕರ್ನಾಟಕದ ಕಲ್ಯಾಣ ಕುರಿತು ಜನಪರ ಸಂಘರ್ಷ ಸಮಿತಿಯ ಕೋರ ಕಮಿಟಿ ಸಭೆ

0
32

ಕಲಬುರಗಿ : ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ೧೮ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಸಮಿತಿಯ ಕೋರ ಕಮಿಟಿ ಸಭೆಯನ್ನು ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ಅಧ್ಯಕ್ಷತೆಯಲ್ಲಿ ನಗರದ ಹಿಂದಿ ಪ್ರಚಾರ ಸಭಾದಲ್ಲಿ ಜರುಗಲಿದೆ ಎಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಅವರು ತಿಳಿಸಿದ್ದಾರೆ.

ಕೊರೊನಾ ೨ನೇ ಅಲೆಯ ಹಿನ್ನಲೆಯಲ್ಲಿ ಸಮಿತಿಯ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಪರ ಹಮ್ಮಿಕೊಂಡಿರುವ ಚಟುವಟಿಕೆಗಳು ಸ್ಥಗಿತಗೊಳಿಸಲಾಗಿತ್ತು. ಇನ್ನು ಮುಂದೆ ನಮ್ಮ ಭಾಗದ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಮತ್ತು ಜ್ವಲಂತ ಸಮಸ್ಯೆಗಳಾದ, ಪ್ರಸ್ತುತ ಸರಕಾರ ವಿಜಯಭಾಸ್ಕರ ಸಮಿತಿಯ ಆಡಳಿತ ಸುಧಾರಣೆಯ ವರದಿಯಂತೆ ಪ್ರಾದೇಶಿಕ ಆಯುಕ್ತರ ಕಚೇರಿಯ ರದ್ದತಿ, ೩೭೧ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಈ ಹಿಂದೆ ಹಮ್ಮಿಕೊಂಡ ಜನಪ್ರತಿನಿಧಿಗಳ ಕಡೆ ಕಲ್ಯಾಣ ನಡೆ ಅಭಿಯಾನದ ಕುರಿತು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕೇಂದ್ರ ಸರಕಾರದ ಯೋಜನೆಗಳಾದ ಏಮ್ಸ್ ಮತ್ತು ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ ಇನ್ನೀತರ ಮಹತ್ವದ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ.

Contact Your\'s Advertisement; 9902492681

೩೭೧ನೇ (ಜೆ) ಕಲಂ ತಿದ್ದುಪಡಿಯ ಅನುಷ್ಠಾನದಲ್ಲಾಗುತ್ತಿರುವ ಲೋಪಗಳ ನಿವಾರಣೆಗೆ ಸರಕಾರದ ಪರಿಷ್ಕೃತ ನಿಯಮಗಳನ್ನು ರಚಿಸಲು ಸರಕಾರ ಅಧಿಕೃತವಾಗಿ ಘೋಷಿಸಿರುವಂತೆ ಒತ್ತಾಯ ತರುವುದು, ಅನುದಾನ ಮಂಜೂರಾತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ತಾರತಮ್ಯ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕುರಿತು ಚರ್ಚಿಸುವುದರ ಜೊತೆಗೆ ಏಳು ಜಿಲ್ಲೆಗಳಲ್ಲಿ ಕಾಲಮಿತಿಯಲ್ಲಿ ಕೊರೊನಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸಂಘಟನೆಯನ್ನು ಕೈಗೊಳ್ಳುವುದರ ಜೊತೆಗೆ ಹೋರಾಟ ಹಮ್ಮಿಕೊಳ್ಳುವು ದರ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here