ಸೇಡಂ: ಸೇಡಂ ಮತಕ್ಷೇತ್ರದಲ್ಲಿ ಕೊವಿಡ್ ಲಸಿಕೆ ಪಡೆಯದವರಿಗೆ ಕೊವಿಡ್ ಲಸಿಕೆ ಅಭಿಯಾನ ಆಯೋಜಿಸಿರುವ ಜೆಡಿಎಸ ಮುಖಂಡ ಬಾಲರಾಜ ಗುತ್ತೇದಾರ ಕಾರ್ಯ ಶ್ಲಾಘನಿಯವಾಗಿದೆ ಎಂದು ಹಾಲಪಯ್ಯ ವಿರಕ್ತ ಮಠದ ಪರಮ ಪೂಜ್ಯ ಪಂಚಾಕ್ಷರಿ ಸ್ವಾಮಿಜಿಗಳು ಹೇಳಿದ್ದರು.
ಸೇಡಂ- ಪಟ್ಟಣದಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಆವರಣದಲ್ಲಿ ಶಾರದಾ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಲರಾಜ ಗುತ್ತೇದಾರ ಬ್ರಿಗೇಡ್ ವತಿಯಿಂದ ಉಚಿತ ಕೊವಿಡ್ ಲಸಿಕೆ ಹಾಗೂ ಬಾಲರಾಜ್ ಗುತ್ತೇದಾರ ಹೇಸರಿನ ಮೇಲಿರುವ ವೆಬ್ ಸೈಟ ಗೆ ಚಾಲನೆ ನೀಡಿ ಮಾತನಾಡಿ ಕೊವಿಡ್ 2 ನೇ ಅಲೆ ವೇಳೆ ಬಾಲರಾಜ ಗುತ್ತೇದಾರ ಅವರು ಸೇಡಂ ಮತಕ್ಷೇತ್ರದಲ್ಲಿ ಉಚಿತ 2 ಅಂಬ್ಯಲೈನ್ಸ ಸೇವೆ, ಪ್ರತಿ ಗ್ರಾಮ ಪ್ರತಿ ವಾರ್ಡ ಗಳ್ಲಲಿ ಸ್ಯಾನಿಟೈಜರ ಸಿಂಪರಣೆ, 45 ಸಾವಿರಕ್ಕೂ ಅಧಿಕ ಬಡ ಕುಟುಂಬಗಳಿಗೆ ಆಹಾರ ಪದಾರ್ಥದ ಕಿಟ್ ವಿತರಣೆ, ಉನ್ನತ ಮಟ್ಟದ ತರಬೇತಿಗಾಗಿ ಇಲ್ಲಿನ ಕಡು ಬಡವರ ಶಿಕ್ಷಣಕ್ಕೆ ಉಚಿತ ತರಬೇತಿ ಶಿಭಿರಗಳ ಆಯೋಜನೆ, ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಮಾಡಿದ್ದು ಅವರ ಕಾರ್ಯ ಶ್ಲಾಘನಿಯ ಎಂದರು.
ನಂತರ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಮಾತನಾಡಿ ಕೊವಿಡ್ ತಡೆಗಟ್ಟಲು ಪ್ರತಿಯೊಬ್ಬರು ಕೊವಿಡ್ ಲಸಿಕೆ ಪಡೆಯುವ ಮುಲಕ ಕೊವಿಡ್ ಮುಕ್ತ ಭಾರತ ವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಉಚಿತ ಕೊವಿಡ್ ಲಸಿಕಾ ಅಭಿಯಾನ ಆಯೋಜನೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಸೇಡಂ ಮತಕ್ಷೇತ್ರದ ಹೋಬಳಿ ಮಟ್ಟದಲ್ಲಿ ಉಚಿತ ಲಸಿಕಾ ಅಭಿಯಾನವನ್ನು ಆಯೋಜನೆ ಮಾಡಲಾಗುವುದು ಎಂದರು.ಜೊತೆಗೆ ಇಂದು ಶ್ರೀ ಗಳ ಅಮೃತ ಹಸ್ತದಿಂದ ವೇಬ್ ಸೈಟ್‌ಗೆ ಚಾಲನೆ ನಿಡಲಾಗಿದ್ದು ಹಳ್ಳಿಗಳಲ್ಲಿನ ಸಮಸ್ಯೆ ನಮ್ಮೊಂದಿಗೆ ಹಂಚಿಕೊಂಡರೆ ನಾವುಅದಕ್ಕೆ ಪರಿಹಾರ ಕೊಡಿಸಲು ಶ್ರಮಿಸುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಜೆಡಿ ಎಸ್ ತಾಲೂಕಾ ಅದ್ಯಕ್ಷ ಎಕ್ಬಾಲಖಾನ್, ಶಾಂತಕುಮಾರ ಹಿರೇಮಠ, ಶಿವಪುತ್ರಪ್ಪ ಮೋಘಾ, ಅಬ್ದುಲ್ ಹಮೀದ್, ವಿಜಯಕುಮಾರ ಕುಲಕರ್ಣಿ, ಸುದಾ, ಅಮೀರ್ ಖಾನ್, ನಾಗರೆಡ್ಡಿ ಮುಚಿಕೇಡ, ಅರುಣ ಪೂಜಾರಿ, ನಾಜೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.