ಜುಲೈ 24: ಪಿಯುಸಿ ವಿದ್ಯಾರ್ಥಿಗಳಿಗೆ ಕರಿಯರ್ ಮಾರ್ಗದರ್ಶನ ಶಿಬಿರ

0
24
ಕಲಬುರಗಿ: ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು ಸಾಗರದ ಇದಿನಬ್ಬ ಫೌಂಡೇಶನ್’ನ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರಾ’ದ ಅಂಗವಾಗಿ ಕಲಬುರಗಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಿಯುಸಿ ನಂತರ ಮುಂದೇನು’ ಮಾರ್ಗದರ್ಶನ ಶಿಬಿರವನ್ನು ‘ಸಂವಾದ ಯುವ ಸಂಪನ್ಮೂಲ ಕೇಂದ್ರ, ಕಲಬುರಗಿ’ ಸಂಸ್ಥೆ ಆಯೋಜಿಸಿದೆ.
ಜುಲೈ 24ರಂದು ಮಧ್ಯಾಹ್ನ 3.00ಕ್ಕೆ ಝೂಮ್ ಆ್ಯಪ್ (ಮೀಟಿಂಗ್ ಐಡಿ: 89564019262 ಪಾಸ್ ಕೋಡ್ 819850)ನಲ್ಲಿ  ಶಿಬಿರ ನಡೆಯಲಿದ್ದು, ಆಸಕ್ತರು ಮೊ.ಸಂ. 9008330455, 9964855537 ಗೆ ಕರೆಮಾಡಿ ಜುಲೈ 23ರ ಒಳಗಡೆ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಶಿಬಿರದಲ್ಲಿ ಕರಿಯರ್ ಪ್ಲಾನಿಂಗ್ ಮಾಡುವುದು ಯಾಕೆ? ಮತ್ತು ಹೇಗೆ?, ಅತ್ತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು ಹೇಗೆ?, ಪಿಯುಸಿ ಬಳಿಕ ಲಭ್ಯವಿರುವ ಕೋರ್ಸುಗಳೇನು?, ಸರಕಾರದ ವಿವಿಧ ಇಲಾಖೆಗಳಲ್ಲಿ ವಿದ್ಯಾರ್ಥಿಗಳಿಗಿರುವ ಯೋಜನೆಗಳೇನು? ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.
ಪ್ರವೇಶ ಉಚಿತವಾಗಿರುವ ಶಿಬಿರದಲ್ಲಿ ರಾಜ್ಯದ ಖ್ಯಾತ ಕರಿಯರ್ ಕೌನ್ಸಿಲರ್ ಮಂಗಳೂರಿನ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಈ ಕುರಿತಾಗಿ ಸಮಗ್ರ ಮಾಹಿತಿ ನೀಡಲಿದ್ದಾರೆ‌ ಎಂದು ‘ಸಂವಾದ ಯುವ ಸಂಪನ್ಮೂಲ ಕೇಂದ್ರ, ಕಲಬುರಗಿ ವಿಭಾಗದ ಸಂಚಾಲಕರಾದ ರುಕ್ಮಿಣಿ ನಾಗಣ್ಣವರ ಮತ್ತು ನಾಗೇಶ ಹರಳಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here