ಮಾನವ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಯಲ್ಲಶೆಟ್ಟಿ

0
86

ಆಳಂದ: ರಾಜ್ಯ ಮಾನವ ಹಕ್ಕುಗಳ ಕಲಬುರಗಿ ಜಿಲ್ಲಾ ಸಮಿತಿಯ ಅಧ್ಯಕ್ಷರನ್ನಾಗಿ ಪಟ್ಟಣದ ಮಲ್ಲಿನಾಥ ಯಲಶೆಟ್ಟಿ ಅವರು ನೇಮಕಗೊಂಡಿದ್ದಾರೆ.

ಈ ಕುರಿತು ಆಯ್ಕೆ ಪ್ರಕಟಿಸಿರುವ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಶ್ರೀನಿವಾಸ್‌ಗೌಡ್ರು ಅವರ ಆದೇಶದ ವಿವರಣೆಯನ್ನು ರಾಜ್ಯ ಮಾನವ ಹಕ್ಕುಗಳ ಮಾಧ್ಯಮ ಸಲಹೆಗಾರ ಡಾ| ಎಸ್.ಎಸ್. ಪಾಟೀಲ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Contact Your\'s Advertisement; 9902492681

ಸಮಿತಿಯ ಜಿಲ್ಲಾ ನೂತನ ಅಧ್ಯಕ್ಷರು ಜಿಲ್ಲೆಯಯ ವಿವಿಧ ತಾಲೂಕು ಗ್ರಾಮೀಣ ಪ್ರದೇಶದಲ್ಲಿನ ಹಳ್ಳಿಗಳಲ್ಲಿನ ಸ್ಥಿತಿಗತಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದು ಕಂಡುಬಂದಲ್ಲಿ ಯಾವುದೇ ಜಾತಿ ಮತ ಪಂಥಗಳ ವ್ಯಕ್ತಿಗಳಿಗೆ ಅನ್ಯಾಯವಾದರೂ ಅಂಥವರ ಪರವಾಗಿ ನ್ಯಾಯಕ್ಕಾಗಿ ಕೆಲಸ ಮಾಡುವುದರ ಜೊತೆಗೆ ಸಂಬಂಧಪಟ್ಟ ಜಿಲ್ಲಾ ಮತ್ತು ತಾಲೂಕಿನ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವ ಕೆಲಸಮಾಡಬೇಕು ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮತ್ತು ಅವ್ಯವಹಾರಗಳ ಬಗ್ಗೆ ವರದಿ ಸಮೇತ ನೇರವಾಗಿ ಭಾರತ ಸರ್ಕಾರದ ಕಾನೂನು ಇಲಾಖೆಗೆ ಹಾಅಗೂ ರಾಜ್ಯ ಸರ್ಕಾರದ ಗಮನಕ್ಕೆ ತರುವ ಮೂಲಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಅವರ ಗಮನಕ್ಕೆ ತರಲು ಪ್ರಯತ್ನಿಸಸಬೇಕು ಎಂದಿದ್ದಾರೆ.

ಸ್ವಚ್ಛ ಆಡಳಿತ, ದಕ್ಷ ಪ್ರಮಾಣಿಕತೆಯ ವ್ಯವಸ್ಥೆಯನ್ನು ಮಾಡುವ ಸಲುವಾಗಿ ನೂತನ ಅಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ಅವರು, ನಿರಂತರ ಹೋರಾಟ ಮುಂದುವರೆಸಿಕೊಂಡು ಹೋಗುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.

ಹುಬ್ಬಳಿಯಲ್ಲಿ ನೆಡದ ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ಯಲಶೆಟ್ಟಿ ಅವರನ್ನು ಡಾ| ಎಸ್.ಎಸ್. ಪಾಟೀಲ ಸನ್ಮಾನಿಸಿ ಅಧಿಕಾರ ವಹಿಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here