ಸಮಾಜದ ಅಭಿವೃದ್ಧಿಗೆ ಸಮಾಜದ ಬಾಂಧವರ ಸಹಕಾರ ಅಗತ್ಯ: ಸುರಪುರ : ಬಣಗಾರ ಸಮಾಜದ ಸಭೆ

0
15

ಸುರಪುರ: ನಗರದ ರಂಗಂಪೇಟೆಯ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಬಣಗಾರ ಸಮಾಜದ ಸಭೆ ಜರುಗಿತು, ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜದ ಮುಖಂಡರು ಹಾಗೂ ನವಿಲೆ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಶ ಚಿನ್ನಿ ಮಾತನಾಡಿ ಬಸವ ಸಾಗರದ ಹಿನ್ನಿರಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಲಿಂಗಸೂಗುರು ಸಮೀಪದ ನವಿಲೆಯ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು ಸೆಪ್ಟಂಬರ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಸಮಾಜದ ಬಾಂಧವರ ಸಹಕಾರ ತುಂಬಾ ಅಗತ್ಯವಾಗಿದ್ದು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಸಮಸ್ತ ಬಣಗಾರ ಸಮಾಜದ ಬಾಂಧವರು ತನು ಮನ ಹಾಗೂ ಧನದ ಮೂಲಕ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

Contact Your\'s Advertisement; 9902492681

ಸಮಿತಿಯ ಕಾರ್ಯದರ್ಶಿ ಅನಿಲ ಕವಿಶೆಟ್ಟಿ ಮಾತಾಡಿದರು, ಈ ಸಂದರ್ಭದಲ್ಲಿ ತಾಲೂಕು ಬಣಗಾರ ಸಮಾಜದ ವತಿಯಿಂದ ಮುಖಂಡರನ್ನು ಸನ್ಮಾನಿಸಲಾಯಿತು, ಸಮಾಜದ ತಾಲೂಕಿನ ಪ್ರಮುಖರಾದ ಶಿವಲಿಂಗಪ್ಪ ಸುರಪುರ,ಕಾಶೀನಾಥ ಬಣಗಾರ,ಪ್ರಕಾಶ ಬಣಗಾರ,ರಮೇಶ ಸಿರಗೋಜಿ,ಶಂಕ್ರಪ್ಪ ಬಣಗಾರ,ಚಂದ್ರಶೇಖರ ಮಂಡಾ,ಸೋಮಶೇಖರ ಚಿಂಚೋಳಿ,ಅನಿಲ್ ನಾಗಲೀಕರ್,ಕಾಶೀನಾಥ ಸರಡಗಿ,ಚಂದ್ರಶೇಖರ ಮಸ್ಕಿ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ವಿಜಯಕುಮಾರ ಬಣಗಾರ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here