ಸೇಡಂ: ಡಿಸೇಲ್ ಬೆಲೆ ಏರಿಕೆಯಾದರೂ ಸಹ ಮಳಖೇಡದ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಸೌಥ್ ಇಂಡಿಯಾ ಸಿಮೆಂಟ್ ಕಾರ್ಖಾನೆಯ ಲಾರಿ ಚಾಲಕರಿಗೆ ಸಿಮೆಂಟ್ ಸಾಗಾಟದ ದರದಲ್ಲಿ ಏರಿಕೆ ಮಾಡಿಲ್ಲ ಎಂದು ರಾಷ್ಟ್ರಕೂಟ ಲಾರಿ ಚಾಲಕರ ಸಂಘದ ಪದಾಧಿಕಾರಿಗಳು ಮಳಖೇಡ ಪಟ್ಟಣದಲ್ಲಿ ನಡೆಸುತ್ತಿರುವ ಮುಷ್ಕರಕ್ಕೆ ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಬೆಂಬಲ ನೀಡಿದ್ದಾರೆ.
ಮುಷ್ಕರದಲ್ಲಿ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಪಾಲ್ಗೊಂಡು ಮಾತನಾಡಿ ಸಂಘದ ಸದಸ್ಯರ ಒಟ್ಟು 240 ಲಾರಿಗಳಿವೆ. ಇತ್ತೀಚೆಗೆ ಡಿಸೇಲ್ ಬೆಲೆ ಏರಿಕೆಯಾಗಿದೆ ಜೊತೆಗೆ ಸರಬರಾಜು ದರವನ್ನೂ ಸಹ ಹೆಚ್ಚಳ ಮಾಡುವುದು ಸಿಮೆಂಟ್ ಕಾರ್ಖಾನೆಯ ಕರ್ತವ್ಯ ಆದರೆ, ಮಳಖೇಡದ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯವರು ಬೆಲೆ ಏರಿಕೆ ಮಾಡಿ ಲಾರಿ ಮಾಲೀಕರ ನೆರವಿಗೆ ಬರದೆ ದೌರ್ಜನ್ಯ ಎಸಗಲು ಮುಂದಾಗಿರುವುದು ಸರಿಯಿಲ್ಲಾ ಈಗ ಎಲ್ಲಾ ದರಗಳೂ ಸಹ ಜಾಸ್ತಿಯಾಗಿವೆ. ಡಿಸೇಲ್ ಜೊತೆಗೆ ಟೈರ ದರವೂ ಸಹ ಹೆಚ್ಚಳವಾಗಿದೆ. ಲಾಭಕ್ಕಿಂತ ಜಾಸ್ತಿ ನಷ್ಟವಾಗುತ್ತಿದೆ. ಇದರಿಂದ ಲಾರಿ ಮಾಲೀಕರು ಹಾಗೂ ಚಾಲಕರ ಬದುಕು ದುಸ್ತರವಾಗಿದೆ ಆದಕಾರಣ ಮಳಖೇಡದ ರಾಜಶ್ರೀ ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಸೌಥ್ ಇಂಡಿಯಾ ಸಿಮೆಂಟ್ ಕಾರ್ಖಾನೆಯ ಲಾರಿ ಚಾಲಕರಿಗೆ ಸಿಮೆಂಟ್ ಸಾಗಾಟದ ದರದಲ್ಲಿ ಏರಿಕೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಏಕ್ಬಾಲಖಾನ. ಸಂಘದ ಅಧ್ಯಕ್ಷ ಅಬ್ಬಾಸ ಅಲಿ ಜಾಗೀರದಾರ, ಸಂತೋಷ ಸಂಗಾವಿ, ಅಜರ್ ರಂಜೊಳ್ಳಿ, ಮೌಲಾನ ಮುಜಾವರ್, ಫಯಾಜ್ ಇನಾಂದಾರ್, ಅಂಬಣ್ಣ ಕೊಳ್ಳುರ್, ಶರಣು ಗುಂಡಿ, ಭೀಮಾಶಂಕರ ಬೊಯ್ಯರ್, ಮಜ್ನು ಪಟೇಲ, ಜಾಫರ ಜಾಗೀರದಾರ, ಅಣ್ಣಪ್ಪ ಚವ್ಹಾಣ, ಅಂಬರೀಶ ಗುಡಿ ಇತರರು ಇದ್ದರು.