ಚಿಕಿತ್ಸೆಗೆ ಬೇಕು ಆರ್ಥಿಕ ನೆರವು

0
7

ಬೈಂದೂರು: ಇಲ್ಲಿನ ಮರವಂತೆ ಜನತಾ ಕಾಲೊನಿ ನಿವಾಸಿ ಶಂಕರ ಖಾರ್ವಿ ಹಾಗೂ ಪಾರ್ವತಿ ಖಾರ್ವಿ ದಂಪತಿಯ ಪುತ್ರ ಸುಭಾಸ್ ಖಾರ್ವಿ (28) ಗುಲಿಯನ್‌ ಬೇರ್ ಸಿಂಡ್ರೋಮ್ ಎಂಬ ನರರೋಗ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಾಯಿಲೆಯ ಚಿಕಿತ್ಸೆಗಾಗಿ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗಾಗಿ ₹ 4 ರಿಂದ ₹ 5 ಲಕ್ಷ ವೆಚ್ಚವಾಗಲಿದೆ ಮಣಿಪಾಲ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಶಂಕರ್‌ ಖಾರ್ವಿ ಅವರು ಮೀನುಗಾರರಾಗಿದ್ದು, ಅವರ ಕುಟುಂಬ ಅವರ ದುಡಿಮೆ ಯಿಂದಲೇ ಸಾಗಬೇಕು. ಅವರು ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜತೆಗೆ ಪಾರ್ವತಿ ಅವರಿಗೂ ಥೈರಾಯ್ಡ್ ಸಂಬಂಧಿ ಕಾಯಿಲೆ ಇದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಮಗ ಸುಭಾಸ್‌ ಖಾರ್ವಿಗೆ ಈ ರೀತಿಯ ನರ ಸಂಬಂಧಿ ರೋಗ ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೊಡಿಸುವುದಕ್ಕೆ ಪೋಷಕರು ಪರದಾಡುತ್ತಿದ್ದಾರೆ.

Contact Your\'s Advertisement; 9902492681

ದಿನದ ದುಡಿಮೆಯಿಂದ ಜೀವನ ಸಾಗಿಸುವ ಕುಟುಂಬಕ್ಕೆ ಮಗನ ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದು ದಾನಿಗಳ, ಸಂಘಟನೆಗಳ ಆರ್ಥಿಕ ನೆರವಿನ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದೆ. ಆರ್ಥಿಕ ನೆರವಿನ ಅಗತ್ಯವಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ.

ಸುಭಾಸ್‌ ಖಾರ್ವಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡು ವವರು ಅವರ ತಾಯಿ ಹೆಸರಿನಲ್ಲಿ ಇರುವ ಮರವಂತೆ ಕೆನರಾ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವಂತೆ ಮನವಿ ಮಾಡಿದ್ದಾರೆ. ಪಾರ್ವತಿ ಶಂಕರ್‌ ಖಾರ್ವಿ, ಉಳಿತಾಯ ಖಾತೆ: 02822250002001 ಐಎಫ್‌ಎಸ್‌ಸಿ ಕೋಡ್: CNRB0010282 ಗೆ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್‌ 78929–98903 ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here