ತಿಂಥಣಿ ಬಳಿಯ ಕೃಷ್ಣಾ ನದಿ ದಡಕ್ಕೆ ಶಾಸಕ ಅಧಿಕಾರಿಗಳ ಭೇಟಿ

0
7

ಸುರಪುರ: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ೩ಲಕ್ಷ ೪೧ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆಯಲ್ಲಿ ತಿಂಥಣಿ ಬಳಿಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಸ್ಥಳಕ್ಕೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಹಾಗು ಯಾದಗಿರಿ ಜಿಲ್ಲಾಧಿಕಾರಿಗಳಾದ ಡಾ: ರಾಗಪ್ರಿಯ ಆರ್. ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು,ಪ್ರವಾಹವಿರುವ ಕಾರಣ ಯಾರೂ ನದಿಯ ಕಡೆಗೆ ಹೋಗದಂತೆ ಎಚ್ಚರಿಸುವ ಜೊತೆಗೆ ನಿಗಾವಹಿಸಲು ಸೂಚಿಸಿದರು.ಅಲ್ಲದೆ ಪ್ರವಾಹ ನಿರ್ವಹಣೆಗಾಗಿ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು ಅಲ್ಲದೆ ತಿಂಥಣಿ ಗ್ರಾಮಸ್ಥರ ಸಭೆಯನ್ನು ನಡೆಸಿ ಯಾವುದೇ ಕಾರಣಕ್ಕೂ ನದಿಯ ಕಡೆಗೆ ಜನರು ಹೋಗದಂತೆ ತಿಳಿಸಿದರು.ಅಲ್ಲದೆ ಅಗತ್ಯವೆನಿಸಿದಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ಸಿ.ಬಿ.ವೇದಮೂರ್ತಿ,ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ,ಸಹಾಯಕ ಆಯುಕ್ತ ಪ್ರಶಾಂತ ಅನಗಂಡಿ,ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಹಾಗು ತಾಲೂಕು ಪಂಚಾಯತಿ ಇಒ ಅಮರೇಶ ಮೂಡಲದಿನ್ನಿ,ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಸೇರಿದಂತೆ ಅಗ್ನಿಶಾಮಕ ದಳದ ಅಧಿಕಾರಿಗಳಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಎಸ್.ಡಿ.ಆರ್.ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಮುಂಜಾಗ್ರತೆ ಕ್ರಮದ ಕುರಿತು ಮಾಹಿತಿ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here